‘ಹಿರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾಕೂಟ 2019’

Update: 2019-11-16 16:52 GMT

ಮಂಗಳೂರು: ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ. ಅದೇ ರೀತಿ ಸತತ ಪ್ರಯತ್ನವು ನಮ್ಮ ಯಶಸ್ವಿಗೆ ಕಾರಣವಾಗುತ್ತದೆ ಎಂದು ಹಿರಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಮುಖ್ಯ ಅತಿಥಿ ಮಹಮ್ಮದ್ ರಮೀಝ್, ಮಿ. ಏಷ್ಯಾ 2019 ಇವರು ಹೇಳಿದರು.

ಹಿರಾ ಆಂಗ್ಲ ಮಾಧ್ಯಮ ಶಾಲೆ ಬಬ್ಬುಕಟ್ಟೆಯಲ್ಲಿ ನಡೆದ ಶಾಲಾ ವಾರ್ಷಿಕ ಕ್ರೀಡಾಕೂಟದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಶಾಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಗಿಡಗಳಿಗೆ ನೀರುಣಿಸುವುದರ ಮುಖಾಂತರ ಮಾಡಲಾಯಿತು. ಈ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ.ಎಚ್. ಮೆಹಮೂದ್ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಆಡಳಿತ ಮಂಡಳಿಯ ಸಂಬಾಲಕ ಅಬ್ದುಲ್ ರಹ್ಮಾನ್ ಹಾಗೂ ರಹಮತುಲ್ಲಾ, ಕಾರ್ಯದರ್ಶಿ ಅಬ್ದುಲ್ ಕರೀಮ್, ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಗುಲ್ಶನ್ ಶೇಖ್, ದೈಹಿಕ ಶಿಕ್ಷಕಿ ವಿದ್ಯಾ, ಮಾಲಾಶ್ರೀ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯಾದ ಖದೀಜ ನಸೀಹ ಸ್ವಾಗತಿಸಿ, ಫಾತಿಮ ತಸ್ನೀಮ್ ವಂದಿಸಿದರು. ಸಹ ಶಿಕ್ಷಕಿ ಜಿಶ್ರ ಬೇಗಮ್  ಕಾರ್ಯಕ್ರಮವನ್ನು ನಿರೂಪಿಸಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News