ಕಲಾಸಕ್ತಿಯು ನಮ್ಮಲ್ಲಿ‌ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ರಮೇಶ್ ರಾವ್

Update: 2019-11-16 17:30 GMT

ಕೊಣಾಜೆ:  ಕಲೆ, ಸಾಹಿತ್ಯ,  ಸಂಸ್ಕೃತಿ ಕ್ಷೇತ್ರದಲ್ಲಿ ಭಾರತದ ಸಾಧನೆ‌ ಅಪಾರವಾಗಿದೆ. ಕಲಾಸಕ್ತಿಯು ನಮ್ಮಲ್ಲಿ ತಾಳ್ಮೆ, ಆತ್ಮವಿಶ್ವಾಸವನ್ನು ‌ಹೆಚ್ಚಿಸುವುದರೊಂದಿಗೆ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಉಡುಪಿಯ ಆರ್ಟಿಸ್ಟ್ ಪೋರಂ ಇದರ ಅಧ್ಯಕ್ಷರಾದ ರಮೇಶ್ ರಾವ್  ಹೇಳಿದರು.

ಅವರು ಯೆನಪೋಯ ವಿಶ್ವವಿದ್ಯಾಲಯದ 'ಗ್ರೂಫ್ ಎಸ್ಥೇಟ್' ವಿಶುವಲ್ ಆರ್ಟ್ ಕ್ಲಬ್ ಹಾಗೂ ಉಡುಪಿಯ ಆರ್ಟಿಸ್ಟ್ಸ್ ಪೋರಂ ಇದರ ಆಶ್ರಯದಲ್ಲಿ ಯೆ‌ನಪೋಯ  (ಪರಿಗಣಿಸಲ್ಪಟ್ಟ ) ವಿಶ್ವವಿದ್ಯಾಲಯ ದಲ್ಲಿ ಶನಿವಾರ ನಡೆದ 'ದಿ ಸ್ಯಾಂಕ್ಟಮ್'  ವರ್ಣ ಚಿತ್ರಗಳ ವಿಷಯದಲ್ಲಿ ಕೋಸ್ಟಲ್ ಕಲಾವಿದರ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಲಾವಿದರ ಕೂಡುವಿಕೆಯೊಂದಿಗೆ ನಡೆಯುವ ಇಂತಹ ಕಾರ್ಯಾಗಾರಗಳು ಹೆಚ್ಚೆಚ್ಚು ನಡೆದು ಪ್ರತಿಯೊಬ್ಬರಲ್ಲೂ ಕಲಾಸಕ್ತಿಯನ್ನು ಬೆಳೆಸುವಂತಾಗಬೇಕು ಎಂದು ಹೇಳಿದರು. ಯೆನಪೋಯ ದಂತ ವೈದ್ಯಕೀಯ ವಿದ್ಯಾಲಯದ ಡೀನ್ ಡಾ. ಅಖ್ತರ್ ಹುಸೇನ್ ಮಾತನಾಡಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕಲೆಯ ಪಾತ್ರವೂ ಪ್ರಮುಖವಾದುದು. ಯುವ ಸಮುದಾಯ ಇಂತಹ ಕ್ಷೇತ್ರದಲ್ಲಿ ಹೆಚ್ಷೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ನಮ್ಮ ಬೌದ್ಧಿಕ ಬೆಳವಣಿಗೆ ಹಾಗೂ ಧನಾತ್ಮಕ ಚಿಂತನೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾಕಾರ ವಿಲ್ಸನ್ ಅವರು ವರ್ಣಚಿತ್ರವನ್ನು ಬಿಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ  ಚಿತ್ರ ಕಲಾವಿದರಾದ ಅರುಣ್ ಅಮೀನ್, ಗಣೇಶ್ ಸೋಮಯಾಜಿ, ಗಣೇಶ್ ಕೆ, ಜನಾರ್ದನ ಹಾವಂಜೆ, ಜಯವಂತ್ ಮಣಿಪಾಲ್, ಜೀವನ್ ಎ.ಎಸ್, ಕಂದನ್ ಜಿ, ಖುರ್ಷಿದ್, ನಾಗರಾಜ್ ಹನೆಹಳ್ಳಿ, ಪವನ್ ಅತ್ತಾವರ, ಪುರುಷೋತ್ತಮ ಅಡ್ವೆ, ರಾಜೇಂದ್ರ ಕೇದಿಗೆ,  ರೇಷ್ಮಾಶೆಟ್ಟಿ, ಸಂತೋಷ್ ಪೈ, ಸತೀಶ್ ಚಂದ್ರ, ಶರದ್ ಪಲಿಮಾರ್, ಶ್ರೀನಾಥ್ ಮಣಿಪಾಲ್, ಸುಲೋಚನ ವಿ.ರಾವ್, ಥೋಮಸ್ ಎಂ.ಜೆ, ವೆಂಕಿ ಪಲಿಮಾರ್, ವಿಷ್ಣು ಶೇಗೂರು, ವಿಶ್ವಾಸ್ ಭಟ್, ವಿಲ್ಸನ್ ಕಯ್ಯಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News