ಬಾಬರಿ ಮಸೀದಿ ಪರ ಕರಪತ್ರ ಹಂಚಿದ ಆರೋಪ: ಉಳ್ಳಾಲದಲ್ಲಿ ಇಬ್ಬರು ಆರೋಪಿಗಳ ಬಂಧನ

Update: 2019-11-17 05:39 GMT

ಉಳ್ಳಾಲ, ನ.17: ಬಾಬರಿ ಮಸೀದಿ ತೀರ್ಪಿನಿಂದ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂಬ ಕರಪತ್ರ ಹಂಚಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.

ಕೆ.ಸಿ.ರೋಡ್ ನಿವಾಸಿಗಳಾದ ಸಿನಾನ್ (21) ಮತ್ತು ಹಕೀಂ(26) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಎಸ್‌ಡಿಪಿಐ ಕಾರ್ಯಕರ್ತರೆನ್ನಲಾಗಿದೆ.

ಬಂಧಿತ ಆರೋಪಿಗಳು ಬಾಬರಿ ಮಸೀದಿ ತೀರ್ಪಿನಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಅನ್ನುವ ಮುದ್ರಿತ ಕರಪತ್ರಗಳನ್ನು ಕೆ.ಸಿ.ರೋಡ್ ಸಮೀಪದ ಮನೆಗಳಿಗೆ ಹಂಚುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಶುಕ್ರವಾರ ತಡರಾತ್ರಿ ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಧಿಸಿ, ಅವರಲ್ಲಿದ್ದ ಕರಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಬಂಧಿತ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News