ಶಿವಾಜಿ ಯಾವುದೇ ಪಕ್ಷಕ್ಕೆ ಸೀಮಿತರಲ್ಲ: ಬಿಜೆಪಿಗೆ ಶಿವಸೇನೆ ತಿರುಗೇಟು

Update: 2019-11-17 14:22 GMT

ಮುಂಬೈ, ನ.17: ಶಿವಾಜಿ ಮಹಾರಾಜರು ಯಾವುದೇ ಜಾತಿ ಅಥವಾ ಪಕ್ಷಕ್ಕೆ ಸೀಮಿತವಾದವರಲ್ಲ. ಅವರು ಮಹಾರಾಷ್ಟ್ರದ 11 ಕೋಟಿ ಜನತೆಗೆ ಸೇರಿದವರು ಎಂದು ಶಿವಸೇನೆ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

 ಶಿವಾಜಿ ಮಹಾರಾಜರ ಆಶೀರ್ವಾದ ಪಡೆದ ಏಕೈಕ ಪಕ್ಷ ಬಿಜೆಪಿ ಎಂಬ ರೀತಿಯಲ್ಲಿ ಆ ಪಕ್ಷ ಚುನಾವಣೆಯಲ್ಲಿ ಪ್ರಚಾರ ನಡೆಸಿತ್ತು. ಆದರೂ ಆ ಪಕ್ಷದ ಅಭ್ಯರ್ಥಿ, ಶಿವಾಜಿಯವರ ವಂಶಸ್ಥ ಉದಯರಾಂಜೆ ಭೋಸಲೆ ಸೋಲುಂಡಿದ್ದಾರೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದಲ್ಲಿ ಪ್ರಕಟವಾದ ಅಂಕಣ ಬರಹದಲ್ಲಿ ಶಿವಸೇನೆಯ ಮುಖಂಡ ಸಂಜಯ್ ರಾವತ್ ಟೀಕಿಸಿದ್ದಾರೆ.

 ಮಹಾರಾಷ್ಟ್ರವು ಬೂಟಾಟಿಕೆ ಮತ್ತು ದುರಹಂಕಾರವನ್ನು ಸಹಿಸದು ಎಂದು ಶಿವಾಜಿ ಮಹಾರಾಜರು ಕಲಿಸಿಕೊಟ್ಟಿದ್ದಾರೆ. ಶಿವಾಜಿ ಮಹಾರಾಜರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಾಗ್ದಾನವನ್ನು ಮರೆತುಬಿಟ್ಟು, ಈ ರಾಜ್ಯದ ಅಧಿಕಾರ ಶಾಶ್ವತವಾಗಿ ತಮ್ಮ ಕೈಯಲ್ಲಿರುತ್ತದೆ ಎಂದು ಯೋಚಿಸಲು ಆರಂಭಿಸುವುದು ಅವರ ಪತನದ ಸಂಕೇತವಾಗಿದೆ ಎಂದು ರಾವತ್ ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

    ನೆರೆಯ ಗುಜರಾತ್ ರಾಜ್ಯದಲ್ಲಿ ಸರ್ದಾರ್ ಪಟೇಲರ ಸ್ಮಾರಕ ರಚಿಸುವ ಯೋಜನೆ ೆ ಪೂರ್ಣಗೊಂಡಿದ್ದರೂ ಮಹಾರಾಷ್ಟ್ರದಲ್ಲಿ ಅರಬಿ ಸಮುದ್ರದಲ್ಲಿ ಶಿವಾಜಿ ಸ್ಮಾರಕ ರಚನೆಯ ಯೋಜನೆ ನನೆಗುದಿಗೆ ಬೀಳಲು ಬಿಜೆಪಿ ಸರಕಾರದ ನಿಷ್ಕ್ರಿಯತೆಯೇ ಕಾರಣ ಎಂದು ರಾವತ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News