ಪನೀರ್, ಕಥಿ ರೋಲ್, ಉತ್ತಪ್ಪಂ, ಪೋಹಾ: ಆರೋಗ್ಯವಂತ ಮಕ್ಕಳಿಗಾಗಿ ಯುನಿಸೆಫ್‌ನ ರೆಸಿಪಿ

Update: 2019-11-17 16:42 GMT

 ಹೊಸದಿಲ್ಲಿ, ನ. 17: ಇಪ್ಪತ್ತು ರೂಪಾಯಿ ಒಳಗಡೆ ಪೋಷಕಾಂಶ ಭರಿತ ಆಹಾರ ಸೇವಿಸುವ ಮೂಲಕ ಮಕ್ಕಳ ಕಡಿಮೆ ತೂಕ, ಬೊಜ್ಜು ಹಾಗೂ ಅನಿಮಿಯಾ ಸಮಸ್ಯೆ ಪರಿಹರಿಸಬಹುದು ಎಂದು ಯುನಿಸೆಫ್‌ನ ಪುಸ್ತಕ ‘ಫ್ರಂ ಉತ್ತಪ್ಪಂ ಟು ಸ್ಪ್ರೌಟೆಡ್ ದಾಲ್ ಪರಾಟ’ದಲ್ಲಿ ಹೇಳಿದೆ.

 5 ವರ್ಷಕ್ಕಿಂತ ಕೆಳಗಿನ ಶೇ. 35 ಮಕ್ಕಳು ಕುಬ್ಜರು, ಶೇ. 17 ಮಕ್ಕಳು ವಯಸ್ಸಿಗೆ ತಕ್ಕ ತೂಕ ಇಲ್ಲದವರು ಹಾಗೂ ಶೇ. 33 ಮಕ್ಕಳು ಕಡಿಮೆ ತೂಕದವರು ಎಂಬ ‘ಸಮಗ್ರ ರಾಷ್ಟ್ರೀಯ ಪೋಷಕಾಂಶ ಸಮೀಕ್ಷೆ 2016-18’ರ ವರದಿಯನ್ನು ಈ ಪುಸ್ತಕ ಆಧಾರವಾಗಿ ಹೊಂದಿದೆ.

 ಹರೆಯದ ಬಾಲಕಿಯರಲ್ಲಿ ಶೇ. 40 ಹಾಗೂ ಹರೆಯದ ಬಾಲಕರಲ್ಲಿ ಶೇ. 18 ಅನಿಮಿಯಾ ಕಂಡು ಬಂದಿದೆ. ಬಾಲ್ಯದಲ್ಲಿ ಹೆಚ್ಚು ಪ್ರಾರಂಭವಾಗುವ ಅಧಿಕ ತೂಕ ಹಾಗೂ ಬೊಜ್ಜು ಶಾಲೆಗೆ ಹೋಗುವ ಮಕ್ಕಳು ಹಾಗೂ ಹರೆಯದವರಲ್ಲಿ ಸಕ್ಕರೆ ಕಾಯಿಲೆಯಂತಹ ಹರಡದ ಖಾಯಿಲೆಗಳಿಗೆ ಕಾರಣವಾಗುತ್ತಿದೆ.

ಈ 28 ಪುಟಗಳ ಪುಸ್ತಕದಲ್ಲಿ ಯುನಿಸೆಫ್ ತಾಜವಾಗಿ ಸಿದ್ಧಪಡಿಸಬಹುದಾದ ರೆಸಿಪಿಗಳ ಪಟ್ಟಿಯನ್ನು ನೀಡಿದೆ. ಅಲ್ಲದೆ, ಪ್ರತಿಯೊಂದನ್ನು ಸಿದ್ಧಪಡಿಸಲು ಬೇಕಾದ ಮೊತ್ತವನ್ನು ಕೂಡ ನೀಡಿದೆ.

ಕಡಿಮೆ ತೂಕವನ್ನು ನಿವಾರಿಸಲು ಬಟಾಟೆ ತುಂಬಿದ ಪರಾಟ, ಪನೀರ್ ಕಥಿ ರೋಲ್ ಹಾಗೂ ಸಾಗು ಕಟ್ಲೆಟ್; ಬೊಜ್ಜನ್ನು ನಿವಾರಿಸಲು ಮೊಳಕೆಯೊಡೆದ ಬೇಳೆ-ಪರಾಟ, ಪೋಹಾ-ತರಕಾರಿ ಉಪ್ಪಿಟ್ಟನ್ನು ಸೇವಿಸುವ ಸಲಹೆ ನೀಡಿದೆ.

 ಕ್ಯಾಲೊರಿ ಲೆಕ್ಕಾಚಾರದೊಂದಿಗೆ ರೆಸಿಪಿಯಲ್ಲಿರುವ ಪ್ರೋಟಿನ್ ಕಾರ್ಬೋಹೈಡ್ರೇಟ್, ಕೊಬ್ಬು, ಫೈಬರ್, ಕಬ್ಬಿಣಾಂಶ, ವಿಟಾಮಿನ್ ಸಿ ಹಾಗೂ ಕ್ಯಾಲ್ಸಿಯಂನ ವಿವರವನ್ನು ಈ ಪುಸ್ತಕ ನೀಡುತ್ತದೆ. ಜನರಿಗೆ ಪೋಷಕಾಂಶ ಹಾಗೂ ಅದರ ಲೆಕ್ಕಚಾರದ ವಿವರ ನೀಡುವ ಗುರಿಯನ್ನು ಪುಸ್ತಕ ಹೊಂದಿದೆ ಎಂದು ಯುನಿಸೆಫ್ ವರಿಷ್ಠೆ ಹೆನ್ರಿಟಾ ಎಚ್. ಫೋರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News