ಸರಕಾರ ರಚನೆಗೆ ಎನ್‌ಸಿಪಿ ನಿರ್ಣಯದ ಹಿನ್ನೆಲೆಯಲ್ಲಿ ಅಯೋಧ್ಯೆ ಭೇಟಿ ಮುಂದೂಡಿದ ಉದ್ಧವ ಠಾಕ್ರೆ

Update: 2019-11-18 14:51 GMT

ಮುಂಬೈ, ನ.18: ಮಹಾರಾಷ್ಟ್ರದಲ್ಲಿ ಪರ್ಯಾಯ ಸರಕಾರ ರಚನೆಗೆ ಎನ್‌ಸಿಪಿ ರವಿವಾರ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ತನ್ನ ನ.24ರ ಅಯೋಧ್ಯೆ ಭೇಟಿಯನ್ನು ಮುಂದೂಡಿದ್ದಾರೆ ಎಂದು ಪಕ್ಷದ ನಾಯಕರೋರ್ವರು ಸೋಮವಾರ ಇಲ್ಲಿ ತಿಳಿಸಿದರು.

ಸರಕಾರ ರಚನೆ ಪ್ರಕ್ರಿಯೆ ಸಮಯವನ್ನು ತೆಗೆದುಕೊಳ್ಳುತ್ತಿದೆ. ಶಿವಸೇನೆ,ಎನ್‌ಸಿಪಿ ಮತ್ತು ಕಾಂಗ್ರೆಸ್ ನಾಯಕರು ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಸರಕಾರ ರಚನೆ ಕುರಿತು ಸಹಮತಕ್ಕೆ ಬರುತ್ತಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತನ್ನ ಅಯೋಧ್ಯೆ ಭೇಟಿಯನ್ನು ಮುಂದೂಡಲು ಠಾಕ್ರೆ ನಿರ್ಧರಿಸಿದ್ದಾರೆ ಎಂದ ಅವರು,ರಾಜಕೀಯ ಪಕ್ಷಗಳ ಅಯೋಧ್ಯೆ ಮತ್ತು ರಾಮ ಜನ್ಮಭೂಮಿ ಭೇಟಿಗೆ ಭದ್ರತಾ ಸಂಸ್ಥೆಗಳೂ ಈಗಾಗಲೇ ಅನುಮತಿಯನ್ನು ನಿರಾಕರಿಸಿವೆ ಎಂದು ಬೆಟ್ಟು ಮಾಡಿದರು.

ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟವು ಶಿವಸೇನೆಯೊಂದಿಗೆ ಸಂಭಾವ್ಯ ಸಮ್ಮಿಶ್ರ ಸರಕಾರವನ್ನು ನಡೆಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ ಮತ್ತು ಅಧಿಕಾರ ಹಂಚಿಕೆ ಕುರಿತು ಮಾತುಕತೆಗಳು ಮುಂದುವರಿಯುವ ನಿರೀಕ್ಷೆಯಿದೆ. ಶಿವಸೇನೆಯು ಮುಖ್ಯಮಂತ್ರಿ ಹುದ್ದೆಯ ತನ್ನ ಬೇಡಿಕೆಯನ್ನು ಸಡಿಲಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News