ಪತಂಜಲಿ ಉತ್ಪನ್ನಗಳ ಬಹಿಷ್ಕಾರಕ್ಕೆ ದಲಿತ ಹೋರಾಟಗಾರರ ಕರೆ

Update: 2019-11-18 17:36 GMT

ಹೊಸದಿಲ್ಲಿ, ನ.18: ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದ ಪೆರಿಯಾರ್ ಇ.ವಿ.ರಾಮಸ್ವಾಮಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಬೆಂಬಲಿಗರನ್ನು ‘ಬುದ್ಧಿಜೀವಿ ಭಯೋತ್ಪಾದಕರು ’ಎಂದು ಬಾಬಾ ರಾಮದೇವ ಅವರು ಟಿವಿ ಸಂದರ್ಶನವೊಂದರಲ್ಲಿ ಬಣ್ಣಿಸಿರುವ ಹಿನ್ನೆಲೆಯಲ್ಲಿ ಅವರ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಲವಾರು ದಲಿತ ನಾಯಕರು ಮತ್ತು ಬುಡಕಟ್ಟು ಗುಂಪುಗಳು ಕರೆ ನೀಡಿದ್ದಾರೆ.

ಅರೆಸ್ಟ್ ರಾಮದೇವ,ಬಾಯ್ಕ್‌ಟ್ ಪತಂಜಲಿ ಮತ್ತ್ತು ಶಟ್‌ಡೌನ್ ಪತಂಜಲಿ ಹ್ಯಾಷ್‌ಟ್ಯಾಗ್‌ಗಳೊಂದಿಗೆ ಟ್ವಿಟರಿಗರು ರಾಮದೇವ ಹೇಳಿಕೆಯನ್ನು ಪ್ರತಿಭಟಿಸಿದ್ದಾರೆ.

ನ.11ರಂದು ರಿಪಬ್ಲಿಕ್ ಟಿವಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ರಾಮದೇವ ಅವರು,‘ಬುದ್ಧಿಜೀವಿ ಭಯೋತ್ಪಾದಕರು ’ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದೂ ಟೀಕಿಸಿದ್ದರು.

ಹೋರಾಟಗಾರ ಹಂಸರಾಜ ಮೀನಾ,ಪ್ರೊ.ದಿಲೀಪ ಮಂಡಲ್,ಅ.ಭಾ.ಪ್ರಗತಿಪರ ಮಹಿಳೆಯರ ಸಂಘದ ಪ್ರ.ಕಾರ್ಯದರ್ಶಿ ಹಾಗೂ ಸಿಪಿಎಂ ನಾಯಕಿ ಕವಿತಾ ಕೃಷ್ಣನ್ ಬಹಿಷ್ಕಾರಕ್ಕೆ ಕರೆ ನೀಡಿರುವ ನಾಯಕರಲ್ಲಿ ಸೇರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪತಂಜಲಿ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆಗಳು ಮುಂದುವರಿದಿರುವ ನಡುವೆಯೇ ರಾಮದೇವ ಅವರ ಇನ್ನೊಂದು ವೀಡಿಯೊ ಸೋಮವಾರ ವ್ಯಾಪಕವಾಗಿ ಶೇರ್ ಆಗಿದೆ. ‘ಪೆರಿಯಾರ್ ಜೀವಂತವಿದ್ದಿದ್ದರೆ ಅವರನ್ನು ಚಪ್ಪಲಿಗಳಿಂದ ಥಳಿಸುತ್ತಿದ್ದೆ,ಆದರೆ ಆಗ ನಾನು ಇದ್ದಿರಲಿಲ್ಲ’ಎಂದು ರಾಮದೇವ ಹೇಳಿರುವುದು ಈ ವೀಡಿಯೊದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News