ನ. 22 ರಂದು ಕೆಸಿಎಫ್ ದುಬೈ ನಾರ್ತ್ ಝೋನ್ ಮೀಲಾದ್ ಸಮಾವೇಶ

Update: 2019-11-19 08:07 GMT

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ನಾರ್ತ್ ಝೋನ್ ಆಶ್ರಯದಲ್ಲಿ "ಹಬೀಬ್ (ಸ.ಅ) ನಮ್ಮ ಜತೆಗಿರಲಿ" ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶವು ನ. 22 ರಂದು ಸಂಜೆ 5.30ಕ್ಕೆ ದುಬೈ ದೇರಾ ಸಿಟಿ ಸೆಂಟರ್ ಹತ್ತಿರವಿರುವ ಪರ್ಲ್ ಸಿಟಿ ಸೂಟ್ ಹೋಟೆಲ್ ಸಂಭಾಂಗಣದಲ್ಲಿ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಪಝಲ್ ಕೋಯಮ್ಮ ತಂಙಳ್ ಕೂರತ್ ದುಆ ನೇತೃತ್ವವನ್ನು ನೀಡಲಿದ್ದು, ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಇಬ್ರಾಹಿಂ ಮದನಿ ಸಾಮಣಿಗೆ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಖ್ಯಾತ ವಾಗ್ಮಿಯೂ,  ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಮೌಲನಾ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಭಾಷಣ ಮಾಡಲಿದ್ದಾರೆ.

ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಶೈಖ್ ಬಾವಾ ಮಂಗಳೂರು ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,  ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಹಣಕಾಸು ವ್ಯವಸ್ಥಾಪಕರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ  ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಹಾಗು ಇತರರು ಭಾಗವಹಿಸಲಿದ್ದಾರೆ.

ಖ್ಯಾತ ಗಾಯಕರಾದ ಹಾಫಿಝ್ ಶಿಹಾಬುದ್ದೀನ್ ಬಾಖವಿ ಕಾವುಂಪಡಿ ನೇತೃತ್ವದಲ್ಲಿ ಬುರ್ದಾ ಆಲಾಪನೆ, ಮೌಲೂದ್ ಪಾರಾಯಣ, ಆಕರ್ಷಣೀಯ ದಫ್ಫ್ ಪ್ರದರ್ಶನ, ಪ್ರತಿಭೋತ್ಸವ ವಿಜೇತ ಸೆಕ್ಟರ್ ಹಾಗೂ ಕಲಾಪ್ರತಿಭೆಗೆ ಬಹುಮಾನ ವಿತರಣೆ, ಸನ್ಮಾನ ಸಮಾರಂಭ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ  ಇಬ್ರಾಹಿಂ ಮದನಿ ಸಾಮಣಿಗೆ , ಇಸ್ಮಾಯಿಲ್ ಮದನಿನಗರ, ಬಶೀರ್ ಪಡುಬಿದ್ರಿ, ಕಲಂದರ್ ಕಬಕ, ರಿಯಾಝ್ ಕೊಂಡಂಗೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News