ಬಂಟ್ವಾಳ : ರಸ್ತೆ ಅಪಘಾತದ ಗಾಯಾಳು ಪಾದಚಾರಿ ಮೃತ್ಯು

Update: 2019-11-19 08:15 GMT

ಬಂಟ್ವಾಳ, ನ. 19: ಕಲ್ಲಡ್ಕದ ಹೆದ್ದಾರಿ ಬಳಿ ಸರಕಾರಿ ಬಸ್ ವೊಂದು ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮಾಣಿ ಸಮೀಪದ ಬುಡೋಳಿ ನಿವಾಸಿ ಅಣ್ಣಿಪೂಜಾರಿ (65) ಮೃತರು ಎಂದು ಗುರುತಿಸಲಾಗಿದೆ.

ನ. 18ರಂದು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದ ಜಂಕ್ಷನ್ ಸಮೀಪ ನಿಂತಿದ್ದಾಗ ಸರಕಾರಿ ಬಸ್ ವೊಂದು ಢಿಕ್ಕಿಯಾಗಿತ್ತು. ಪರಿಣಾಮ ಅಣ್ಣಿ ಪೂಜಾರಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಣ್ಣಿ ಪೂಜಾರಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ  ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಬ್ಯಾಂಡ್ ಬಾರಿಸುವ ವೃತ್ತಿ ಮಾಡುತ್ತಿದ್ದ ಇವರು, ಬ್ಯಾಂಡ್ ಅಣ್ಣಿ ಪೂಜಾರಿ ಎಂದೇ ಚಿರಪರಿಚಿತರಾಗಿದ್ದರು. ಕೆಲ ವರ್ಷಗಳ ಹಿಂದೆ ಇವರ ಅವಿವಾಹಿತ ಮಗ ಉಮೇಶ್ ಕೂಡಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News