ಜನಪರ ವಿಶ್ವವಿದ್ಯಾನಿಲಯ ನನ್ನ ಆಶಯ: ಕುಲಪತಿ ಪ್ರೊ.ಯಡಪಡಿತ್ತಾಯ

Update: 2019-11-19 15:39 GMT

ಮಂಗಳೂರು, ನ.19: ಮಂಗಳೂರು ವಿಶ್ವವಿದ್ಯಾನಿಲಯ ಜನರ ಪರವಾಗಿ ಕೆಲಸ ಮಾಡಲಿದೆ. ವಿಶ್ವವಿದ್ಯಾನಿಲಯವು ತನ್ನ ವ್ಯಾಪ್ತಿಯ ಜನರ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ.ಎಸ್. ಯಡಪಡಿತ್ತಾಯ ಹೇಳಿದ್ದಾರೆ.

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಎಸ್‌ಎಸ್ ಸಿಡಿಎಫ್ ನಗರದ ಪುರಭವನದಲ್ಲಿ ಆಯೋಜಿಸಿರುವ ಮೂರು ದಿನಗಳ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭ ಯಶೋಧ ಕರನಿಂಗ ಬರೆದಿರುವ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕರಿತಾದ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಅರಿವು ನೀಡುವ ಯಾವುದೇ ಕಾರ್ಯಕ್ರಮಕ್ಕೂ ವಿಶ್ವವಿದ್ಯಾನಿಲಯವು ಬೆಂಬಲಿಗನಾಗಿ ನಿಲ್ಲುತ್ತದೆ. ವಿಶ್ವವಿದ್ಯಾನಿಲಯವನ್ನು ವಿಭಿನ್ನವಾಗಿ ರೂಪಿಸಬೇಕು, ಇತರರಿಗಿಂತ ಭಿನ್ನವಾಗಿ ಕೆಲಸ ಮಾಡಬೇಕು ಹಾಗೂ ಅದು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂಬುದು ತನ್ನ ಮೂಲ ಆಶಯವಾಗಿದೆ ಎಂದು ಕುಲಪತಿ ಪ್ರೊ. ಯಡಪಡಿತ್ತಾಯ ಹೇಳಿದರು.
ಈ ಸಂದರ್ಭ ಲೇಖಕಿ ಡಾ. ಯಶೋಧ ಕರನಿಂಗ, ಪತ್ರಕರ್ತ ಎಂ.ಎಂ.ಎ. ಶರೀಫ್ ಹಾಗೂ ರಂಗಭೂಮಿ ನಟ ಇಂದುಶೇಖರ್ ಅವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್ ಸಿಡಿಎಫ್ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ನೋಟರಿ ಗಂಗಾಧರ್ ಉಳ್ಳಾಲ. ಸಾಮಾಜಿಕ ಕಾರ್ಯಕರ್ತೆ ಬಿ.ಕೆ. ಭಾಗೀರಥಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News