ಅಂಗಡಿಗೆ ನುಗ್ಗಿ ಬಟ್ಟೆ ಕಳವು

Update: 2019-11-19 16:21 GMT

ಕುಂದಾಪುರ, ನ.19: ಕುಂದಾಪುರ ಮುಖ್ಯ ರಸ್ತೆಯ ಕುಂದೇಶ್ವರ ದೇವಸ್ಥಾನದ ಬಳಿಯ ಬಟ್ಟೆ ಅಂಗಡಿಗೆ ನ.18ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಬಟ್ಟೆಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಖಲಂದರ ಶಾಫಿ ಎಂಬವರ ಡೆಲ್ಲಿ ಬಜಾರ್ ಅಂಗಡಿಯ ಒಳಗೆ ನುಗ್ಗಿದ ಕಳ್ಳರು, ಬಟ್ಟೆ ಇಡುವ ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ಮಹಿಳೆಯರ ಟಾಪ್, ಚೂಡಿ ದಾರ, ನೈಟಿ ಹಾಗೂ ಮಕ್ಕಳ ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗಿ ರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 24,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News