ಉಡುಪಿ ಜಿಲ್ಲಾ ಮಟ್ಟದ ಕಬ್, ಬುಲ್-ಬುಲ್ ಉತ್ಸವ

Update: 2019-11-19 16:31 GMT

ಉಡುಪಿ, ನ.19: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಸ್ಥಳೀಯ ಸಂಸ್ಥೆ ಕಾಪು ಹಾಗೂ ಶ್ರೀ ಆನಂದ ತೀರ್ಥ ವಿದ್ಯಾಲಯ ಪಾಜಕ ಕ್ಷೇತ್ರ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಪಾಜಕದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಕಬ್, ಬುಲ್-ಬುಲ್ ಉತ್ಸವ ನಡೆಯಿತು.

ಶಿಬಿರದಲ್ಲಿ 500ಕ್ಕೂ ಅಧಿಕ ಕಬ್, ಬುಲ್-ಬುಲ್ ಶಿಕ್ಷಕ-ಶಿಕ್ಷಕಿಯರು, ಸ್ವಯಂಸೇವಕರು ಭಾಗವಹಿಸಿದ್ದು, ಧ್ವಜವಂದನೆ ಸರ್ವಧರ್ಮ ಪ್ರಾರ್ಥನೆ, ವ್ಯಶಿಬಿರಾಗ್ನಿ, ಕಲರವ, ಬೆದರುಗೊಂಬೆ ತಯಾರಿ, ಸಾಹಸಮಯ ಆಟಗಳು, ಹೊರ ಸಂಚಾರ, ಪುರಮೆರವಣಿಗೆ ಸಂದರ್ದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಜನಪದ ನೃತ್ಯ, ಅಭಿನಯ ಗೀತೆ, ತೆಂಗಿನ ಗರಿಗಳಿಂದ ಕರಕುಶಲ ವಸ್ತುಗಳು, ಜಲ್ಲಿ ಕಲ್ಲುಗಳಿಂದ ಆಕೃತಿ ರಚನೆ, ಮುಖವಾಡ ತಯಾರಿ, ಬಿ.ಪಿ ಚಿತ್ರರಚನೆ, ಸ್ವಚ್ಚತೆ, ಆಟೋಟ, ಜನಪದ ಗೀತೆ ಸ್ಪರ್ಧೆ ಧ್ವಜ ವಂದನೆ ಮುಂತಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು.

ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥರು ಶಿಬಿರವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ ಆಚಾರ್ಯ ವಹಿಸಿದ್ದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಡಾ.ವಿಜಯೇಂದ್ರ ವಸಂತ್, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜೆ. ಪೈ, ಭಾಗವಹಿಸಿದ್ದರು.

ಜಿಲ್ಲಾ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ಡಾ.ಜಯರಾಮ ಶೆಟ್ಟಿಗಾರ್, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎನ್. ನಾಗರಾಜ ಬಲ್ಲಾಳ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಗೀತಾ ಎಸ್. ಕೊಟ್ಯಿಯನ್ ಸ್ವಾಗತಿಸಿದರು. ವಿದ್ಯಾ ವಂದಿಸಿ, ಜಿಲ್ಲಾ ತರಬೇತಿ ಆಯುಕ್ತ ಬಿ.ಆನಂ ಅಡಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News