ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ

Update: 2019-11-19 17:05 GMT

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಂದಿನ 20 ತಿಂಗಳಿಗೆ ನಡೆದ 5 ಸ್ಥಾಯಿ ಸಮಿತಿ ಚುನಾವಣೆಯಲ್ಲಿ 33 ಬಿಜೆಪಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರು ಸ್ಥಾಯಿ ಸಮಿತಿಗೆ ಆಯ್ಕೆ ಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಸಾಮಾನ್ಯ ಸಭೆಯ ಬಳಿಕ ನಡೆದ ಚುನಾವಣೆಯಲ್ಲಿಂದು ಈ ಆಯ್ಕೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯುತ್ತಿತ್ತು. ಆದರೆ ಸ್ಥಾಯಿ ಸಮಿತಿಯಲ್ಲಿ 5 ಕನಿಷ್ಠ ಒಂದು ಸ್ಥಾನವನ್ನು  ವಿಪಕ್ಷಗಳಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್ ಸ್ಥಾಯಿ ಸದಸ್ಯರ ಆಯ್ಕೆ ನಡೆದಿದೆ. ಇದರಿಂದಾಗಿ ಸಹಜವಾಗಿ ಸಂಖ್ಯಾ ಬಲದಲ್ಲಿ ಮುಂದಿದ್ದ ಬಿಜೆಪಿ ಐದು ಸ್ಥಾಯಿ ಸಮಿತಿಯಲ್ಲಿ ಸಂಪೂರ್ಣ ವಾಗಿ ಮೇಲುಗೈ ಸಾಧಿಸಿದ್ದಾರೆ.

ಜಿಲ್ಲಾ ಪಂಚಾಯತ್ ನ ಮೂರನೆ ಅವಧಿಯ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾಪಂಚಾಯತ್ ನ ಒಟ್ಟು 36 ಮಂದಿ ಸದಸ್ಯ ರಲ್ಲಿ 21ಬಿಜೆಪಿ ಹಾಗೂ 15 ಕಾಂಗ್ರೆ ಸ್ ಪಕ್ಷದ ಸದಸ್ಯ ರನ್ನು ಹೊಂದಿದೆ. ಜೊತೆಗೆ ಸಂಸದರು, ಶಾಸಕರು, ತಾ.ಪಂ ಅಧ್ಯಕ್ಷ ರನ್ನು ಒಳಗೊಂಡಂತೆ ದ.ಕ ಜಿಲ್ಲಾಪಂಚಾಯತ್ ನಲ್ಲಿ ಬಿಜೆಪಿ ಒಟ್ಟು 33 ಮತ್ತು ಕಾಂಗ್ರೆಸ್ 21ಸದಸ್ಯರ ಬಲವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News