ಯೆನೆಪೋಯ : ಅವಧಿಪೂರ್ವ ಶಿಶು ಜನನದ ಸಮಗ್ರ ಆರೈಕೆಯ ಕ್ಲಿನಿಕ್ ಉದ್ಘಾಟನೆ, ಜಾಗೃತಿ ಕಾರ್ಯಕ್ರಮ

Update: 2019-11-19 17:09 GMT

ಕೊಣಾಜೆ:  ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಕ್ಕಳ ವಿಭಾಗದ ಆಶ್ರಯದಲ್ಲಿ ಅವಧಿಪೂರ್ವ ಜನಿಸಿದ ಶಿಶುಗಳ ಸಮಗ್ರ ಆರೈಕೆಗಾಗಿ ಸಂಯೋಜಿತ ರೀತಿಯಲ್ಲಿ ಸೇವೆಯನ್ನು ಒದಗಿಸುವ ಕ್ಲಿನಿಕ್‍ನ ಉದ್ಘಾಟನೆಯನ್ನು ಯೆನೆಪೋಯ ಪರಿಗಣಿಸ್ಪಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ ಡಾ.ಯಂ.ವಿಜಯಕುಮಾರ್, ಕುಲಸಚಿವರಾದ ಡಾ. ಗಂಗಾಧರ ಸೋಮಯಾಜಿ, ಯೆನೆಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೂಸಬ್ಬ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಪದ್ಮನಾಭ ಸಂಪತ್ತಿಲ ಹಾಗೂ ಮಕ್ಕಳ ವಿಭಾಗದ ಎಲ್ಲಾ ಪ್ರ್ರಾಧ್ಯಾಪಕ ವೈದ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವ ಅವಧಿಪೂರ್ವ ದಿನದ ಅಂಗವಾಗಿ ಅವಧಿಪೂರ್ವ ಜನಿಸಿದ ಶಿಶುಗಳ ಸಮಗ್ರ ಆರೋಗ್ಯದ ಕುರಿತು ಜಾಗ್ರತಿಯನ್ನು  ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಯೆನೆಪೋಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಎಂ.ಎಸ್.ಮೂಸಬ್ಬರವರು  ಅವಧಿಪೂರ್ವ ಶಿಶುಗಳ ಆರೈಕೆಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಅವಧಿಪೂರ್ವ ಶಿಶುಗಳ ಆರೈಕೆ ಕುರಿತು ಜಾಗೃತಿ ಮೂಡಿಸಲು ಮುದ್ರಿಸಲಾದ ಕರಪತ್ರವನ್ನು ಹಾಗೂ ಶಿಶುಗಳ ಚಿಕಿತ್ಸಾ ಕಾರ್ಡನ್ನು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ. ಎಸ್. ಪದ್ಮನಾಭರವರು ಬಿಡುಗಡೆ ಮಾಡಿದರು.

ಮಕ್ಕಳ ವಿಭಾಗದ ನವಜಾತ ಶಿಶು ತಜ್ಞ ಡಾ. ಮಿಥುನ್ ಹಾಗೂ ಡಾ. ಶಾಕಿಬ್ ಶಾಫಿ, ನೇತ್ರ ಶಾಸ್ತ್ರಜ್ಞೆ ಡಾ.ಅನುಪಮ ಶ್ಯಾಂ ಸುಧೀರ್, ಕಿವಿ-ಮೂಗು-ಗಂಟಲು ವಿಭಾಗದ ಡಾ.ನಂದಿನಿ ಹಾಗೂ ಡಾ.ಪೌಜಿಯಾರವರು ಅವಧಿಪೂರ್ವ ಶಿಶುಗಳ ಆರೈಕೆಯ ವಿವಿಧ ಆಯಾಮಗಳ ಬಗ್ಗೆ ಮಾಹಿತಿ ನೀಡಿದರು.

ಅವಧಿಪೂರ್ವ ಶಿಶುಗಳ ಆರೈಕೆ ಬಗ್ಗೆ ಜಾಗೃತಿಗಾಗಿ ಯೆನೆಪೋಯ ನರ್ಸಿಂಗ್ ಕಾಲೇಜಿನ ವತಿಯಿಂದ ಹಮ್ಮಿಕೊಂಡ ಇ-ಪೋಸ್ಟರ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತ ನಿರ್ವಾಹಕ  ಅಧಿಕಾರಿ ಡಾ. ಸುನೀತಾ ಸಲ್ದಾನ್ಹ ಸ್ವಾಗತಿಸಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮಹಮ್ಮದ್ ಗುತ್ತಿಗಾರ್ ವಂದಿಸಿದರು.

ಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ.ಅನಿತಾ ಪ್ರಭು, ಕಿವಿ-ಮೂಗು-ಗಂಟಲು ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಲಕ್ಷ್ಮಿ  ಹಾಗೂ ಮುಖ್ಯ ನರ್ಸಿಂಗ್ ಅಧಿಕಾರಿ ಸಿಸ್ಟರ್ ಐಲಿನ್ ಮಥಾಯಿಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ನಿರ್ವಾಹಕರಾದ ವಿಜಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News