ವಳಚ್ಚಿಲ್‍ನಲ್ಲಿ ಮಾದಕ ದ್ರವ್ಯ ವ್ಯಸನದ ಜಾಗೃತಾ ಜಾಥ

Update: 2019-11-20 06:54 GMT

ಮಂಗಳೂರು : ವಳಚ್ಚಿಲ್‍ನ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ. ಜಿಲ್ಲಾ ಘಟಕ ಇದರ ಸಹಯೋಗದೊಂದಿಗೆ ಫಾರ್ಮಸಿ ಸಪ್ತಾಹದ ಅಂಗವಾಗಿ ಮಾದಕ ವ್ಯಸನದ ಜಾಗೃತಾ ಜಾಥಾವನ್ನು ವಳಚ್ಚಿಲ್ ನಲ್ಲಿ ಹಮಿಕೊಳ್ಳಲಾಗಿತ್ತು.

ಶ್ರೀನಿವಾಸ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್‍ಮಯ್ಯ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿ, ಫಾರ್ಮ ರ್ಯಾಲಿಗೆ ಚಾಲನೆ ನೀಡಿದರು.

ಡಿ.ಫಾರ್ಮ, ಬಿ.ಫಾರ್ಮ ಮತ್ತು ಎಂ.ಫಾರ್ಮ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರದ ಅರಿವು ಮೂಡಿಸುವ ವಿವಿಧ ಬಿತ್ತಿಪತ್ರ ಪ್ರದರ್ಶಿಸಿ ಹಾಗೂ ಕರ ಪತ್ರವನ್ನು ಹಂಚುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಫಾರ್ಮ. ಡಿ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳನ್ನು ಬೀದಿನಾಟಕಗಳ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಿದರು ಮತ್ತು ಹಚ್ಚ ಹಸುರು ಪರಿಸರ ಸಂರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗಿದರು.

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‍ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಆರ್.ಶಬರಾಯ ಇವರು ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆಯ ಹಾಗೂ ಸಮರ್ಪಕ ರೀತಿಯಲ್ಲಿ ಔಷಧ ಸೇವನೆಯ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಕರೆಯಿತ್ತರು.

ಕಾರ್ಯಕ್ರಮದ ಸಂಯೋಜಕರಾದ ಶ್ರೀಪತಿ ಡಿ, ಇವರು ಅತಿಥಿಗಳನ್ನು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಜಾಗೃತಾ ಜಾಥದ ಗುರಿ ಮತ್ತು ಧ್ಯೇಯವನ್ನು ವಿವರಿಸಿದರು. ಡಾ.ಇ.ವಿ.ಎಸ್. ಸುಬ್ರಹ್ಮಣ್ಯಂ, ಪ್ರೊಫೆಸರ್, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‍ನ ಮಂಗಳೂರು ಡಾ. ಸತೀಶ್ ಎಸ್, ಡಾ. ಕೃಷ್ಣಾನಂದ ಕಾಮತ್, ವೀರೇಶ್ ಕೆ. ಚೆಂಡೂರ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಮಾರು 800ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News