ಶ್ರೀನಿವಾಸದಲ್ಲಿ ರಾಷ್ಟ್ರೀಯ ಫಾರ್ಮಸಿ ಸಪ್ತಾಹ-2019

Update: 2019-11-20 07:00 GMT

ಮಂಗಳೂರು : ವೃತ್ತಿಪರ ಮನೋಭಾವವನ್ನು ಬೆಳೆಸಿಕೊಂಡು ಮಾದಕ ದ್ರವ್ಯ ಸೇವನೆ ಮತ್ತು ಯುವಪೀಳಿಗೆಯ ಮೇಲೆ ಅದರ ಪ್ರಭಾವದ ಬಗ್ಗೆ ಜಾಗರೂಕರಾಗಲು ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್ವರಿ ದೇವಿ ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಇವರು ವಳಚ್ಚಿಲ್‍ನ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯ, ಹಾಗೂ ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್ ದ.ಕ ಜಿಲ್ಲಾ ಘಟಕ ಇದರ ಸಹಯೋಗದೊಂದಿಗೆ  ಏರ್ಪಡಿಸಲಾಗಿದ್ದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಉದ್ಘಾಟಿಸಿದರು.

ಡಾ.ಶ್ರೀನಿವಾಸ್ ರಾವ್, ಪ್ರೊ. ಚಾನ್ಸೆಲರ್, ಶ್ರೀನಿವಾಸ್ ಯುನಿವರ್ಸಿಟಿ, ಉಪಾಧ್ಯಕ್ಷರು, ಎ.ಶಾಮರಾವ್ ಪೌಂಡೇಶನ್, ಮಂಗಳೂರು ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ನ್ಯಾನೋ ತಂತ್ರಜ್ಞಾನದಲ್ಲಿ ಜೀವ ಉಳಿಸುವ ಔಷಧಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕರೆಯಿತ್ತರು.

ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‍ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಆರ್.ಶಬರಾಯ  ಔಷಧ ಉತ್ಪನ್ನ ಆಧಾರಿತದಿಂದ ರೋಗಿಗಳ ಆರೋಗ್ಯ ರಕ್ಷಣೆ ಆಧಾರಿತ ವಿಧಾನಕ್ಕೆ ಬದಲಾಗುವಂತೆ ಯುವ ಔಷಧಿಕಾರರಿಗೆ ಸೂಚಿಸಿದರು.

ಡಾ.ಇ.ವಿ.ಎಸ್. ಸುಬ್ರಹ್ಮಣ್ಯಂ, ಪ್ರೊಫೆಸರ್, ಶ್ರೀನಿವಾಸ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಉಪಾಧ್ಯಕ್ಷರು, ಇಂಡಿಯನ್ ಫಾರ್ಮಾಸ್ಯುಟಿಕಲ್ ಅಸೋಸಿಯೇಶನ್‍ನ ಮಂಗಳೂರು ಇವರು ಅತಿಥಿಗಳನ್ನು ಸ್ವಾಗತಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ಗುರಿ ಮತ್ತು ಧ್ಯೇಯವನ್ನು ವಿವರಿಸಿದರು.

ಅನುಷಾ ಶೆಟ್ಟಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ರಾಷ್ಟ್ರೀಯ ಫಾರ್ಮಸಿ ಸಪ್ತಾಹದ ವಿವಿಧ ಕಾರ್ಯಕ್ರಮಗಳನ್ನು ತಿಳಿಸಿದರು. ಅಯಿಷಾ ಮತ್ತು ಫಾತಿಮಾ ಇವರು ಕಾರ್ಯಕ್ರಮನ್ನು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಸತೀಶ್ ಎಸ್, ಡಾ. ಕೃಷ್ಣಾನಂದ ಕಾಮತ್, ಶ್ರೀಪತಿ ಡಿ, ವೀರೇಶ್ ಕೆ. ಚೆಂಡೂರ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News