ಸೂರಿಂಜೆ - ಸುರತ್ಕಲ್ : ಕೊಳೆತು ನಾರುತ್ತಿರುವ ಕಸದ ತ್ಯಾಜ್ಯ

Update: 2019-11-20 07:27 GMT

ಬಜ್ಪೆ : ಎಕ್ಕಾರು ಹುಣ್ಸೆಕಟ್ಟೆ ಯಿಂದ ಶಿಬರೂರು ರಸ್ತೆಯ ಎಕ್ಕಾರು ಪದವು -ಕುತ್ತೆತ್ತೂರು  -ಸೂರಿಂಜೆ ಯಿಂದ ಸುರತ್ಕಲ್ ಗೆ ಹೋಗುವ ರಸ್ತೆಯ ಸಮೀಪ ಪಾಳು ಬಿದ್ದ ಹೊಂಡ ವೊಂದರಲ್ಲಿ ಕಸದ ತ್ಯಾಜ್ಯವು ಕೊಳೆತು ಗಬ್ಬುನಾಥ ಬೀರುತ್ತಿದೆ.

ರಸ್ತೆಯ ಸಮೀಪವೇ ದೊಡ್ಡ ಗಾತ್ರದ ಪಾಳು ಬಿದ್ದ ಹೊಂಡವೊಂದಿದ್ದು ಇದಕ್ಕೆ ದಿನಂಪ್ರತಿ ಕಸ ತ್ಯಾಜ್ಯ ತಂದು ಸುರಿಯುತ್ತಿದ್ದು ಕಂಡುಬರುತ್ತಿದೆ. ಇದರಿಂದ ಈ ರಸ್ತೆಯ ಮೂಲಕ ಸುರತ್ಕಲ್ ಹಾಗೂ ಇನ್ನಿತರ ಕಡೆಗಳಿಗೆ ಹೋಗುವ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಹೊಗುವಂತಹ ಪರಿಸ್ಥಿತಿ ಎದುರಾಗಿದೆ.

ಈ ರಸ್ತೆಯು ಸುರತ್ಕಲ್ ಗೆ ಸಂಪರ್ಕ ಕಲ್ಪಿಸುವಂತಹ ತೀರಾ ಹತ್ತಿರದ ರಸ್ತೆಯಾಗಿದೆ. ಬಹಳಷ್ಟು ವಾಹನಗಳು ಈ ರಸ್ತೆಯ ಮೂಲಕವೇ ಸುರತ್ಕಲ್ ಹಾಗೂ ಇನ್ನಿತರ ಕಡೆಗಳಿಗೆ ಸಂಚರಿಸುತ್ತದೆ. ಇದಕ್ಕೆ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂಬುವುದು ಸಾರ್ವಜನಿಕರ ಒತ್ತಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News