ಮೂಡುಬಿದಿರೆ : ಆಳ್ವಾಸ್‍ನಲ್ಲಿ ಪ್ರಕೃತಿ ಚಿಕಿತ್ಸಾ ದಿನಾಚರಣೆ

Update: 2019-11-20 07:31 GMT

ಮೂಡುಬಿದಿರೆ : ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಉದ್ಘಾಟನೆಯನ್ನು ಮೂಡುಬಿದಿರೆಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ನೆರವೇರಿಸಲಾಯಿತು.

ನ್ಯಾಷನಲ್ ಇನ್ಸಿಟ್ಯೂಟ್ ಆಫ್ ನ್ಯಾಚುರೋಪತಿ, ಪುಣೆ ಇದರ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಿಜಾರಿನ ಸಾರ್ವಜನಿಕರು ಮತ್ತು ಆಳ್ವಾಸ್ ಆನಂದಮಯ ಆರೋಗ್ಯಧಾಮದ ಸಾಧಕರು ಈ ಸಮಯದಲ್ಲಿ ಉಪಸ್ಥಿತರಿದ್ದರು.  

ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಎಸ್. ಶೆಟ್ಟಿ ಪ್ರಕೃತಿ ಚಿಕಿತ್ಸೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಪ್ರಕೃತಿ ಚಿಕಿತ್ಸಾ ಪದ್ಧತಿಯ ಪಾಲನೆಯ ಅಗತ್ಯವನ್ನು ವಿವರಿಸಿದರು. ಮೂಡುಬಿದಿರೆಯ ಪ್ರಕೃತಿ ಚಿಕಿತ್ಸಾ ಹೊರರೋಗಿ ವಿಭಾಗ ಮತ್ತು ಕಾರ್ಕಳದ ರೋಟರಿ ಕ್ಲಬ್‍ನ ಸಹಯೋಗದಲ್ಲಿ ಪ್ರಕೃತಿ ಚಿಕಿತ್ಸಾ ದಿನಾಚರಣೆಯು ನಡೆಯಲಿದೆ ಎಂದು ಅವರು ಹೇಳಿದರು.

ಕಾಲೇಜಿನ ಡೀನ್ ಡಾ. ವೃಂದಾ ಬೇಡೆಕರ್ ಗಾಂಧೀಜಿಯವರು ಅನುಸರಿಸಿದ ಸರಳ ಜೀವನ ಮತ್ತು ಪ್ರಕೃತಿ ಚಿಕಿತ್ಸಾ ಜೀವನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಪ್ರಕೃತಿ ಚಿಕಿತ್ಸೆ ಮೇಲಿದ್ದ ಆಸಕ್ತಿಯನ್ನು ವಿವರಿಸುವ ಕಿರು ಪುಸ್ತಕವನ್ನು ಹಂಚಲಾಯಿತು.

ದೀಕ್ಷಾ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು, ಗ್ರೀಷ್ಮಾ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News