ಕೆನಡ: ನೂತನ ಸರಕಾರದಲ್ಲಿ 4 ಭಾರತ ಮೂಲದ ಸಚಿವರು

Update: 2019-11-21 16:35 GMT
Photo: Pixabay

ಒಟ್ಟಾವ (ಕೆನಡ), ನ. 21: ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಬುಧವಾರ 37 ಸದಸ್ಯರ ಸಚಿವ ಸಂಪುಟವನ್ನು ರಚಿಸಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪುಟಕ್ಕೆ ಓರ್ವ ಹಿಂದೂ ಮಹಿಳೆಯನ್ನು ಅವರು ಸೇರ್ಪಡೆ ಮಾಡಿದ್ದಾರೆ. ಅವರ ಸಂಪುಟದಲ್ಲಿ ಮೂವರು ಸಿಖ್ಖರೂ ಇದ್ದಾರೆ.

ಟೊರಾಂಟೊ ವಿಶ್ವವಿದ್ಯಾನಿಲಯದ ಮಾಜಿ ಕಾನೂನು ಪ್ರೊಫೆಸರ್ ಅನಿತಾ ಆನಂದ್ ಕೆನಡ ಸಂಪುಟಕ್ಕೆ ಸೇರ್ಪಡೆಯಾದ ಹಿಂದೂ ಮಹಿಳೆಯಾಗಿದ್ದಾರೆ. ಅವರ ಸಂಪುಟಕ್ಕೆ ಸೇರ್ಪಡೆಯಾದ ಮೂವರು ಸಿಖ್ಖರೆಂದರೆ ನವದೀಪ್ ಬೈನ್ಸ್ (42 ವರ್ಷ), ಬಾರ್ದಿಶ್ ಚಗ್ಗರ್ (39) ಮತ್ತು ಹರ್ಜಿತ್ ಸಜ್ಜನ್ (49). 47 ವರ್ಷದ ಟ್ರೂಡೊ ನೇತೃತ್ವದ ಲಿಬರಲ್ ಪಕ್ಷದ ಅಲ್ಪಸಂಖ್ಯಾತ ಸರಕಾರ ಒಟ್ಟಾವದ ರೈಡೋ ಹಾಲ್‌ನಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದೆ.

55ರ ಆಸುಪಾಸಿನಲ್ಲಿರುವ ಅನಿತಾ ಆನಂದ್ ಒಂಟಾರಿಯೊ ರಾಜ್ಯದ ಓಕ್‌ವಿಲ್ ಕ್ಷೇತ್ರವನ್ನು ಪ್ರತನಿಧಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ 338 ಸದಸ್ಯರ ಹೌಸ್ ಆಫ್ ಕಾಮನ್ಸ್‌ಗೆ ಅವರು ಮೊದಲ ಬಾರಿ ಆಯ್ಕೆಯಾಗಿದ್ದಾರೆ.

ಅವರಿಗೆ ಸಾರ್ವನಿಕ ಸೇವೆಗಳು ಮತ್ತು ಖರೀದಿ ಖಾತೆಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News