ಮಸೂದೆಗಳಿಗೆ ವೀಟೊ ಚಲಾಯಿಸಲು ಟ್ರಂಪ್‌ಗೆ ಚೀನಾ ಒತ್ತಾಯ

Update: 2019-11-21 16:37 GMT

ಬೀಜಿಂಗ್, ನ. 21: ಹಾಂಕಾಂಗ್‌ನಲ್ಲಿ ಮಾನವಹಕ್ಕುಗಳನ್ನು ಬೆಂಬಲಿಸಿ ಅಮೆರಿಕದ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿರುವ ಮಸೂದೆಗೆ ವೀಟೊ ಚಲಾಯಿಸುವ ಮೂಲಕ ತಡೆ ಹಾಕುವಂತೆ ಚೀನಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದೆ.

ಹಾಂಕಾಂಗ್‌ಗೆ ಸಂಬಂಧಿಸಿದ ಮಸೂದೆಗಳು ಕಾಯ್ದೆಯಾದರೆ ‘ತೀವ್ರ ಪ್ರತೀಕಾರಾತ್ಮಕ ಕ್ರಮ’ಗಳನ್ನು ತೆಗೆದುಕೊಳ್ಳುವ ತನ್ನ ಬೆದರಿಕೆಯನ್ನು ಅದು ಪುನರುಚ್ಚರಿಸಿದೆ.

‘ಹಾಂಕಾಂಗ್ ಹ್ಯೂಮನ್ ರೈಟ್ಸ್ ಆ್ಯಂಡ್ ಡೆಮಾಕ್ರಸಿ ಆ್ಯಕ್ಟ್’ ಹಾಂಕಾಂಗ್‌ನಲ್ಲಿ ಚೀನಾ ಮತ್ತು ಅಮೆರಿಕ- ಎರಡೂ ದೇಶಗಳ ಹಿತಾಸಕ್ತಿಗಳನ್ನು ಕಡೆಗಣಿಸುತ್ತದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News