ಭಾರತಕ್ಕೆ ನೌಕಾ ಗನ್‌ಗಳ ಮಾರಾಟಕ್ಕೆ ಅಮೆರಿಕ ಅಂಗೀಕಾರ

Update: 2019-11-21 16:39 GMT

ವಾಶಿಂಗ್ಟನ್, ನ. 21: ಸುಮಾರು 1.02 ಬಿಲಿಯ ಡಾಲರ್ (ಸುಮಾರು 7,300 ಕೋಟಿ ರೂಪಾಯಿ) ವೆಚ್ಚದ 13 ಎಂಕೆ45 ಮೇಲ್ಮೈ ನಿಗ್ರಹ ಮತ್ತು ವಾಯು ನಿಗ್ರಹ ನೌಕಾ ಗನ್ ಸಿಸ್ಟಮ್‌ಗಳನ್ನು ಭಾರತಕ್ಕೆ ಮಾರಾಟ ಮಾಡುವ ಪ್ರಸ್ತಾಪಕ್ಕೆ ಅಮೆರಿಕ ಬುಧವಾರ ಅಂಗೀಕಾರ ನೀಡಿದೆ.

‘‘ಪ್ರಸ್ತಾಪಿತ ಮಾರಾಟವು ಪ್ರಾದೇಶಿಕ ರಕ್ಷಣಾ ಭಾಗೀದಾರ ದೇಶದ ಭದ್ರತೆಯನ್ನು ಸುಧಾರಿಸುವ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶ ನೀತಿಯನ್ನು ಬಲಪಡಿಸುತ್ತದೆ’’ ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆಯು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರಸಕ್ತ ಈ ಗನ್ ಸಿಸ್ಟಮ್‌ಗಳನ್ನು ಅಮೆರಿಕ, ಡೆನ್ಮಾರ್ಕ್, ದಕ್ಷಿಣ ಕೊರಿಯ ಮತ್ತು ಜಪಾನ್‌ಗಳ ನೌಕಾಪಡೆಗಳು ಬಳಸುತ್ತಿವೆ. ಈ ಗನ್‌ಗಳ ವ್ಯಾಪ್ತಿಯು 36 ಕಿ.ಮೀ.ಗಿಂತಲೂ ಅಧಿಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News