ಕಾಶ್ಮೀರ ಸಹಜಸ್ಥಿತಿಯಲ್ಲಿದೆ ಎಂಬ ಅಮಿತ್ ಶಾ ಹೇಳಿಕೆ ಮರುದಿನವೇ ಎಲ್ಲ ಅಂಗಡಿಗಳ ಬಾಗಿಲು ಬಂದ್

Update: 2019-11-22 07:13 GMT

ಶ್ರೀನಗರ, ನ.22: ಕಾಶ್ಮೀರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಮರುದಿನವೇ, ಕಾಶ್ಮೀರದ ಎಲ್ಲ ಅಂಗಡಿ ಮಾಲಕರು ತಮ್ಮ ಅಂಗಡಿಯ ಬಾಗಿಲು ಮುಚ್ಚಿ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ರಸ್ತೆಯಲ್ಲಿ ಸರಕಾರಿ ಸಾರಿಗೆಗಳ ಸಂಚಾರ ವಿರಳವಾಗಿದ್ದು, ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿವೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರಕಾರ ಆಗಸ್ಟ್ 5ರಂದು ರದ್ದುಪಡಿಸಿದ ಬಳಿಕ 100ಕ್ಕೂ ಅಧಿಕ ದಿನಗಳಿಂದ ಕಾಶ್ಮೀರದಾದ್ಯಂತ ಅಂಗಡಿ-ಮುಗ್ಗಟ್ಟುಗಳು ವ್ಯಾಪಾರ-ವಹಿವಾಟನ್ನು ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸುತ್ತಿವೆ.

ಅಂಗಡಿ-ಮುಗ್ಗಟ್ಟುಗಳನ್ನು ತೆರೆಯದಂತೆ ಪೋಸ್ಟರ್‌ಗಳ ಮೂಲಕ ಬೆದರಿಕೆ ಹಾಕುತ್ತಿರುವ ಹೊರತಾಗಿಯೂ ಇತ್ತೀಚೆಗೆ ಕಣಿವೆ ರಾಜ್ಯದ ವ್ಯವಹಾರ ಕೇಂದ್ರಗಳು ಹಾಗೂ ಅಂಗಡಿ-ಮುಗ್ಗಟ್ಟುಗಳು ದಿನಪೂರ್ತಿ ಕಾರ್ಯಾಚರಿಸಿದ್ದವು.

ಬುಧವಾರ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಅಮಿತ ಶಾ, ‘‘ಕಾಶ್ಮೀರ ಸಂಪೂರ್ಣವಾಗಿ ಸಹಜಸ್ಥಿತಿಗೆ ಮರಳುತ್ತಿದೆ. ಸರಕಾರಿ ಕಚೇರಿಗಳು ಹಾಗೂ ಶಿಕಣ ಸಂಸ್ಥೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News