ಈ ವರ್ಷ ವಶಪಡಿಸಿಕೊಳ್ಳಲಾದ ಅಕ್ರಮ ನಗದಿನಲ್ಲಿ ಶೇ 43.22ರಷ್ಟು 2,000 ರೂ. ನೋಟುಗಳು

Update: 2019-11-22 14:02 GMT

ಹೊಸದಿಲ್ಲಿ, ನ.22: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ನಗದಿನ ಪೈಕಿ ಶೇ. 43.22ರಷ್ಟು ನಗದು 2,000 ಮುಖಬೆಲೆಯ ನೋಟುಗಳಾಗಿದ್ದವು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಎರಡು ಆರ್ಥಿಕ ವರ್ಷಗಳಲ್ಲಿ ಈ ಪ್ರಮಾಣ ಶೇ.60ಕ್ಕಿಂತಲೂ ಅಧಿಕವಾಗಿತ್ತು.

ಐದು ಕೋಟಿಗೂ ಅಧಿಕ ಮೌಲ್ಯದ ಅಕ್ರಮ ನಗದು ವಶಪಡಿಸಿಕೊಳ್ಳಲಾದ ಪ್ರಕರಣಗಳ ಕುರಿತ ಅಂಕಿಅಂಶಗಳನ್ನು ನೀಡಿದ ಸಚಿವೆ, ಈ ರೀತಿ ವಶಪಡಿಸಿಕೊಳ್ಳಲಾದ ನಗದಿನಲ್ಲಿ ರೂ 2,000 ನೋಟುಗಳ ಪ್ರಮಾಣ 2017-18ರಲ್ಲಿ ಶೇ 67.91, 2018-19ರಲ್ಲಿ ಶೇ 65.93 ಹಾಗೂ 2019-20ರಲ್ಲಿ ಇಲ್ಲಿಯ ತನಕ ಶೇ 43.22 ಆಗಿದೆ.

ಅದೇ ಸಮಯ ರೂ 2,000 ಮುಖಬೆಲೆಯ ನೋಟುಗಳನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಡುವ ಪ್ರಕರಣಗಳೂ ಕಡಿಮೆಯಾಗಿವೆ ಎಂದೂ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News