ದಲಾಯಿ ಲಾಮಾ ಉತ್ತರಾಧಿಕಾರಿ ನಿರ್ಣಯ ಹಕ್ಕು ಚೀನಾಕ್ಕಿಲ್ಲ: ಅಮೆರಿಕ

Update: 2019-11-22 15:47 GMT

ವಾಶಿಂಗ್ಟನ್, ನ. 22: ಟಿಬೆಟ್‌ನ ಆಧ್ಯಾತ್ಮಿಕ ಗುರು ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ನಿರ್ಣಯಿಸುವ ಹಕ್ಕು ಚೀನಾ ಸರಕಾರಕ್ಕೆ ಸೇರಿಲ್ಲ ಎಂದು ಗುರುವಾರ ಅಮೆರಿಕ ಹೇಳಿದೆ ಹಾಗೂ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯು ಸಾಮಾನ್ಯ ವಿಧಾನಗಳಂತೆ ನಡೆಯುವಂತೆ ಖಚಿತಪಡಿಸಬೇಕು ಎಂದು ಅಂತರ್‌ರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.

‘‘ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹಕ್ಕು ಚೀನಾಕ್ಕೆ ಸೇರಿಲ್ಲ ಎನ್ನುವುದನ್ನು ಅಂತರ್‌ರಾಷ್ಟ್ರೀಯ ಸಮುದಾಯ ಖಚಿತಪಡಿಸಬೇಕು. ಟಿಬೆಟ್‌ನ ಬೌದ್ಧರು ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು’’ ಎಂದು ಅಮೆರಿಕದ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್ ವಿಶೇಷ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.

‘‘ವಿಶ್ವಸಂಸ್ಥೆಯು ಈ ವಿಷಯವನ್ನು ಎತ್ತಿಕೊಳ್ಳಬೇಕು. ಇತರ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮತ್ತು ಜಗತ್ತಿನಾದ್ಯಂತ ಇರುವ ಸರಕಾರಗಳು ಕೂಡ ಈ ಬಗ್ಗೆ ಗಮನಹರಿಸಬೇಕು. ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ ಮತ್ತು ಮಾನವಹಕ್ಕುಗಳ ಬಗ್ಗೆ ಕಾಳಜಿಯಿರುವ ಯುರೋಪಿಯನ್ ಸರಕಾರವು ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು’’ ಎಂದು ಬ್ರೌನ್‌ಬ್ಯಾಕ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News