ಟೆಸ್ಟ್ ನಲ್ಲಿ 100 ವಿಕೆಟ್ ಬಲಿ ಪಡೆದ ಭಾರತ 5ನೇ ವಿಕೆಟ್‌ಕೀಪರ್ ಸಹಾ

Update: 2019-11-22 18:01 GMT

ಕೋಲ್ಕತಾ, ನ.22: ವೃದ್ಧಿಮಾನ್ ಸಹಾ ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದ ಭಾರತದ ಐದನೇ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತನ್ನ ತವರು ಮೈದಾನ ಈಡನ್‌ಗಾರ್ಡನ್ಸ್‌ನಲ್ಲಿ ಶುಕ್ರವಾರ ಆರಂಭವಾದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಹಾ ಈ ಸಾಧನೆ ಮಾಡಿದ್ದಾರೆ.

35ರ ಹರೆಯದ ಸಹಾ ಬಾಂಗ್ಲಾದ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ಹಿಂದುಗಡೆ ಎರಡು ಕ್ಯಾಚ್ ಪಡೆದರು. ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಇಸ್ಲಾಂ(29)ನೀಡಿದ ಕ್ಯಾಚ್ ಪಡೆದ ಸಹಾ ಒಟ್ಟು 100 ವಿಕೆಟ್ ಬಲಿ ಪಡೆದರು. ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಮಹಮ್ಮೂದುಲ್ಲಾ(6)ನೀಡಿದ ಕ್ಯಾಚ್‌ನ್ನು ಸಹಾ ಪಡೆದರು.

ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಬಲಿ ಪಡೆದ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧೋನಿ 294 ವಿಕೆಟ್‌ಗಳನ್ನು ಬಲಿ ಪಡೆದಿದ್ದಾರೆ.

ಧೋನಿ,ಸಹಾರಲ್ಲದೆ, ಸಯ್ಯದ್ ಕೀರ್ಮಾನಿ, ಕಿರಣ್ ಮೋರೆ ಹಾಗೂ ನಯನ್ ಮೊಂಗಿಯಾ ಟೆಸ್ಟ್‌ನಲ್ಲಿ 100 ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಬಲಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News