ಎರಡೂ ಪ್ರೆಸಿಡೆಂಟ್ಸ್ ಟ್ರೋಫಿ ಬಾಚಿಕೊಂಡ ಭಾರತ

Update: 2019-11-22 18:05 GMT

ಪುಟಿಯನ್(ಚೀನಾ), ನ.22: ಭಾರತ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಅತ್ಯಮೋಘ ಸಾಧನೆ ಮಾಡಿದ್ದು, ಶೂಟರ್‌ಗಳು 10 ಮೀ. ಏರ್ ಪಿಸ್ತೂಲ್ ಹಾಗೂ ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಗಳಲ್ಲಿ ಪ್ರೆಸಿಡೆಂಟ್ಸ್ ಟ್ರೋಫಿಗಳನ್ನು ಎತ್ತಿಹಿಡಿದಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಿಕ್ಸೆಡ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು ಭಾಕೆರ್ ರಶ್ಯದ ಅರ್ಟೆಮ್ ಚೆನೊಸೋವ್ ಜೊತೆಗೂಡಿ ಭಾರತದ ಸೌರಭ್ ಚೌಧರಿ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಅನ್ನಾ ಕೊರಕಾಕಿ ಅವರನ್ನು 17-13 ಅಂತರದಿಂದ ಸೋಲಿಸಿದರು.

ದಿವ್ಯಾಂಶ್ ಸಿಂಗ್ ಪನ್ವಾರ್ ಕ್ರೊಯೇಶಿಯದ ಲೆಜೆಂಡ್ ಜೆಝನಾ ಪೆಜ್‌ಸಿಕ್ ಜೊತೆ 10ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಟ್ರೋಫಿ ಜಯಿಸಿದರು. ದಿವ್ಯಾಂಶ್-ಪೆಜ್‌ಸಿಕ್ ಜೋಡಿ ಭಾರತದ ಅಪೂರ್ವಿ ಚಾಂಡೇಲ ಹಾಗೂ ಡಿ.ಝಾಂಗ್‌ರನ್ನು 16-14 ಅಂತರದಿಂದ ಸೋಲಿಸಿತು.

ಮನು ಹಾಗೂ ದಿವ್ಯಾಂಶ್ 10 ಮೀ. ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಏರ್ ಪಿಸ್ತೂಲ್ ಹಾಗೂ ರೈಫಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಮೂರು ಚಿನ್ನ ಜಯಿಸಿದ್ದ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News