ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿ ಇತಿಹಾಸ ನಿರ್ಮಿಸಿದ ಫವಾದ್ ಮಿರ್ಝಾ

Update: 2019-11-22 18:06 GMT

ಹೊಸದಿಲ್ಲಿ, ನ.22: ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿರುವ ಕುದುರೆ ಸವಾರ ಫವಾದ್ ಮಿರ್ಝಾ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. 20 ವರ್ಷಗಳ ಬಳಿಕ ಕುದುರೆ ಸವಾರಿ ಸ್ಪರ್ಧೆಯಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ.

ಈ ತಿಂಗಳಾರಂಭದಲ್ಲಿ ಯುರೋಪ್ ಹಂತ ಮುಗಿದ ಬಳಿಕ 27ರ ಹರೆಯದ ಮಿರ್ಝಾ ವೈಯಕ್ತಿಕ ಸ್ಪರ್ಧೆಯ ವಿಭಾಗದಲ್ಲಿ ಆಗ್ನೇಯ ಏಶ್ಯ, ಒಶಿಯಾನಿಯಾದ ಜಿ ಗುಂಪಿನಲ್ಲಿ ಅತ್ಯುನ್ನತ ಶ್ರೇಯಾಂಕಿತ ರೈಡರ್ ಎನಿಸಿಕೊಂಡಿದ್ದರು. ಫೆ.20ರಂದು ಅಂತರ್‌ರಾಷ್ಟ್ರೀಯ ಕುದುರೆ ಸವಾರಿ ಫೆಡರೇಶನ್ ಈ ಕುರಿತು ಅಧಿಕೃತ ಘೋಷಣೆ ಮಾಡಲಿದೆ. ಇಮ್ತಿಯಾಝ್ ಅನೀಸ್(2000ರ ಸಿಡ್ನಿ ಒಲಿಂಪಿಕ್ಸ್) ಹಾಗೂ ಮಾಜಿ ವಿಂಗ್ ಕಮಾಂಡರ್ ಐಜೆ ಲಾಂಬಾ(1996ರ ಅಟ್ಲಾಂಟ ಒಲಿಂಪಿಕ್ಸ್)ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಆಗಸ್ಟ್‌ನಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಮಿರ್ಝಾ 6 ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಒಟ್ಟು 64 ಅಂಕಗಳನ್ನು ಗಳಿಸಿದ್ದರು. ಮೊದಲ ಕುದುರೆಯಲ್ಲಿ 34 ಅಂಕ ಗಳಿಸಿದರೆ, ಎರಡನೇ ಕುದುರೆಯಲ್ಲಿ 30 ಅಂಕ ಕಲೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News