ತೂಮಿನಾಡಿನಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2019-11-23 06:22 GMT

ಕೆ.ಸಿ ರೋಡ್, ನ.23: ಅರಬ್ ರೈಡರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಭಾಗಿತ್ವದಲ್ಲಿ ಯೇನಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ ಸಹಕಾರದೊಂದಿಗೆ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ 221 ನೇ ರಕ್ತದಾನ ಶಿಬಿರವು ತೂಮಿನಾಡ್ ಅಲ್ ಫತ್ತಾಹ್ ಜುಮಾ ಮಸೀದಿ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ದುವಾದ ಮೂಲಕ ಉದ್ಘಾಟಿಸಿ ಮಾತನಾಡಿದ ಅಲ್ ಫತ್ತಾಹ್ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಹಿಮಾನ್ ಅರ್ಶದಿ, ರಕ್ತದಾನದಂತಹ ಅತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ನಡೆಸುವುದರೊಂದಿಗೆ ತಾವು ಕ್ರೀಡೆಗೆ ಮಾತ್ರ ಸೀಮಿತವಾಗದೆ ಇನ್ನು ಮುಂದಕ್ಕೂ ಹೀಗೇ ಸಾಮಾಜಿಕ ರಂಗದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಬ್ ರೈಡರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಯಹ್ಯಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರಬ್ ರೈಡರ್ಸ್ ಉಪಾಧ್ಯಕ್ಷರುಗಳಾದ ಅಶ್ರಫ್ ಕೊಹಿನೂರು, ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಬಿಡಿಎಂ ಕಾರ್ಯ ನಿರ್ವಾಹಕ ಫಾರೂಕ್ ಬಿಗ್ ಗ್ಯಾರೇಜ್ ಇಸ್ಮಾಯಿಲ್ ಹಿಲ್ ಟೋಪ್, ಕೋಶಾಧಿಕಾರಿ ಅಶ್ರಫ್ ಸಕ್ಲೈನ್, ಅರಬ್ ರೈಡರ್ಸ್ ಇದರ ತರಬೇತುದಾರ ಸತ್ತಾರ್ ಗೋಳ್ತಮಜಲು, ಪತ್ರಕರ್ತ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಕಾರ್ಯ ನಿರ್ವಾಹಕ ಇಮ್ರಾನ್ ಉಪ್ಪಿನಂಗಡಿ, ಶಾಹುಲ್ ಹಮೀದ್ ಕಾಶಿಪಟ್ಣ, ರಝಾಕ್ ಸಾಲ್ಮರ, ಜಮಾಲ್ ಕಲ್ಲಡ್ಕ ಉಪಸ್ಥಿತರಿದ್ದರು.

ಅರಬ್ ರೈಡರ್ಸ್ ಇದರ ಕಾರ್ಯದರ್ಶಿ ಸಿದ್ದೀಕ್ ತಂಙಳ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News