ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಷಿ ನಿಧನ
Update: 2019-11-24 21:29 IST
ಭೋಪಾಲ್, ನ. 24: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ಜೋಷಿ ಬಹುಕಾಲದ ಅಸೌಖ್ಯದ ಬಳಿಕ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
‘‘ಅವರು ಭೋಪಾಲದ ಬನ್ಸಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು’’ ಎಂದು ಅವರ ಪುತ್ರ ಹಾಗೂ ರಾಜ್ಯದ ಮಾಜಿ ಸಚಿವ ದೀಪಕ್ ಜೋಷಿ ತಿಳಿಸಿದ್ದಾರೆ. ಕೈಲಾಶ್ ಜೋಷಿ ಅವರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕೈಲಾಶ್ ಜೋಷಿ ಅವರ ಪತ್ನಿ ಕೆಲವು ತಿಂಗಳ ಹಿಂದೆ ನಿಧನರಾಗಿದ್ದರು. ಕೈಲಾಸ್ ಜೋಷಿ ಅವರ ಅಂತ್ಯಕ್ರಿಯೆ ದೇವಾಸ್ ಜಿಲ್ಲೆಯ ಹತಿಪಿಪಾಲ್ಯ ಪಟ್ಟಣದಲ್ಲಿರುವ ಹಿರಿಯರ ನಿವಾಸದಲ್ಲಿ ಸೋಮವಾರ ನಡೆಯಲಿದೆ ಎಂದು ಬಿಜೆಪಿಯ ಮಾಜಿ ಸಂಸದ ಅಲೋಕ್ ಸಂಜಾರ್ ತಿಳಿಸಿದ್ದಾರೆ.