ಹಾಂಕಾಂಗ್ ಜಿಲ್ಲಾ ಮಂಡಳಿ ಚುನಾವಣೆ: ಬಿಗುಭದ್ರತೆ ನಡುವೆ ಶಾಂತಿಯುತ ಮತದಾನ

Update: 2019-11-24 17:00 GMT

ಹಾಂಕಾಂಗ್, ನ.24: ಹಾಂಕಾಂಗ್‌ನಲ್ಲಿ ರವಿವಾರ ನಡೆದ ಜಿಲ್ಲಾ ಮಂಡಳಿ ಚುನಾ ವಣೆಗಳಿಗೆ ಭಾರೀ ಸಂಖ್ಯೆಯ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಚುನಾವಣೆಯ ಫಲಿತಾಂಶವು ಬೀಜಿಂಗ್ ಬೆಂಬಲಿತ ಹಾಂಕಾಂಗ್ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲಿದೆಯೆಂಬ ಭರವಸೆಯನ್ನು ಪ್ರಜಾಪ್ರಭುತ್ವ ಪರ ಚಳವಳಿಯ ಮುಖಂಡರು ಹೊಂದಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪ್ರತಿ ರವಿವಾರ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆಗಳಿಗೆ ಸಾಕ್ಷಿಯಾಗಿದ್ದ ಹಾಂಕಾಂಗ್‌ನಲ್ಲಿ ಇಂದು ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರೆಳೆ ಯುವಂತಾಯಿತು.

ಇಂದು ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದ ಪ್ರಜಾಪ್ರಭುತ್ವ ಪರ ಸಂಘಟನೆಗಳು ಜನತೆ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುವಂತೆ ಕರೆ ನೀಡಿದರು. ಇಂದು ಬೆಳಗ್ಗೆ 7:30ಕ್ಕೆ ಮತದಾನ ಆರಂಭಗೊಂಡಿತ್ತು. ಹಾಂಕಾಂಗ್‌ನ 41 ಲಕ್ಷ ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. ಹಾಂಕಾಂಗ್‌ನ 18 ಜಿಲ್ಲೆಗಳಾದ್ಯಂತ 452 ಕೌನ್ಸಿಲರ್‌ಗಳನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಚುನಾವಣೆಗೆಂದೇ ಸುಮಾರು 4 ಲಕ್ಷ ಮಂದಿ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಂಡಿರುವುದು ಪ್ರಜಾಪ್ರಭುತ್ವ ಪರ ಚಳವಳಿಕಾರರ ಪಾಳಯಕ್ಕೆ ಒಂದು ಸಕಾರಾತ್ಮಕ ಸಂಕೇತವೆಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಹಾಗೂ ಹಾಂಕಾಂಗ್‌ನ ಪ್ರಮುಖ ಬೀದಿಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News