ಸಂಜಯ್ ರಾವತ್ ಪ್ರಕಾರ ‘ಆಪರೇಷನ್ ಕಮಲ’ಕ್ಕೆ ಈ ನಾಲ್ವರು ಕಾರಣರಂತೆ

Update: 2019-11-25 14:49 GMT

ಮುಂಬೈ, ನ.25: ಬಿಜೆಪಿ ವಿರುದ್ಧ ಸೋಮವಾರ ದಾಳಿ ನಡೆಸಿದ ಶಿವಸೇನೆಯ ನಾಯಕ ಸಂಜಯ ರಾವತ್ ಅವರು ಮಹಾರಾಷ್ಟ್ರದಲ್ಲಿ ನಾಲ್ವರಿಂದ ‘ಆಪರೇಷನ್ ಕಮಲ ’ನಡೆದಿದೆ ಎಂದು ಸಿಬಿಐ, ಈ.ಡಿ., ಆದಾಯ ತೆರಿಗೆ ಮತ್ತು ಪೊಲೀಸ್ ಇಲಾಖೆಗಳನ್ನು ಹೆಸರಿಸಿ ಆರೋಪಿಸಿದರು. ಆದರೆ ಬಿಜೆಪಿಯ ಈ ಕುತಂತ್ರ ಇಲ್ಲಿ ಯಾವುದೇ ಫಲ ನೀಡುವುದಿಲ್ಲ. ಅದಕ್ಕೆ ಬಹುಮತವಿದ್ದರೆ ಆಪರೇಷನ್ ಕಮಲದ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ತನಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದು ಒತ್ತಿ ಹೇಳಿದ ರಾವತ್, ಅಜಿತ್ ಪವಾರರನ್ನು ಬೆಂಬಲಿಸಿದ್ದವರು ಕ್ರಮೇಣ ವಾಪಸಾಗುತ್ತಿದ್ದಾರೆ. ಆಪರೇಷನ್ ಕಮಲದ ಇಡೀ ಕಾರ್ಯಾಚರಣೆ ಗುರ್ಗಾಂವ್‌ನ ಹೋಟೆಲ್ಲೊಂದರಲ್ಲಿ ನಡೆದಿತ್ತು. ಕಳೆದ ರಾತ್ರಿ ಅಲ್ಲಿಗೆ ಧಾವಿಸಿದ್ದ ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ ಎಂದರು.

ಬಿಜೆಪಿ ತಮಗೆ ಒಡ್ಡಿದ್ದ ಆಮಿಷಗಳ ಕುರಿತು ಮತ್ತು ಅದು ಹೇಗೆ ತಮಗೆ ಬೆದರಿಕೆಗಳನ್ನೊಡ್ಡಿತ್ತು ಎನ್ನುವುದನ್ನು ಗುರ್ಗಾಂವ್ ಹೋಟೆಲ್‌ನಲ್ಲಿದ್ದ ಎನ್‌ಸಿಪಿ ಶಾಸಕರು ತಿಳಿಸಿದ್ದಾರೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News