×
Ad

ಮಲೇಶ್ಯಕ್ಕೆ ಅಕ್ರಮವಾಗಿ ರಫ್ತು ಮಾಡಿದ ಪ್ಲಾಸ್ಟಿಕ್ ತ್ಯಾಜ್ಯ ಹಿಂಪಡೆಯಲು ಬ್ರಿಟನ್ ಒಪ್ಪಿಗೆ

Update: 2019-11-25 22:05 IST

ಕೌಲಾಲಾಂಪುರ, ನ.25: ಮಲೇಶ್ಯಕ್ಕೆ ಅಕ್ರಮವಾಗಿ ರಫ್ತು ಮಾಡಿದ ಪ್ಲಾಸ್ಟಿಕ್ ತ್ಯಾಜ್ಯದ 42 ಕಂಟೈನರ್‌ಗಳನ್ನು ವಾಪಸ್ ತೆಗೆದುಕೊಳ್ಳಲು ಬ್ರಿಟನ್ ಒಪ್ಪಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಏಶ್ಯದ ಹಲವಾರು ರಾಷ್ಟ್ರಗಳು ವಿಶ್ವದ ಕಸದ ರಾಶಿಯಾಗುವುದನ್ನು ವಿರೋಧಿಸಿವೆ.

ಆಗ್ನೇಯ ಏಶ್ಯದ ದೇಶಗಳಿಗೆ ಕಳೆದ ವರ್ಷದಿಂದ ಯುಎಸ್ ಮತ್ತು ಆಸ್ಟ್ರೇಲಿಯಾದಂತಹ ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳು ಪ್ರವಾಹದಂತೆ ಹರಿದು ಬಂದಿವೆ. ಬೃಹತ್ ಮರುಬಳಕೆ ಉದ್ಯಮವನ್ನು ಇಷ್ಟಪಡುವ ಪಡುವ ಚೀನಾ ಕೂಡಾ ಆಮದನ್ನು ನಿಲ್ಲಿಸುವಂತೆ ಆದೇಶಿಸಿದೆ.

ನಿಷೇಧ ಜಾರಿಗೆ ಬಂದ ನಂತರ ಚೀನಾದಿಂದ ಅನೇಕ ಮರುಬಳಕೆ ವ್ಯವಹಾರಗಳು ಮಲೇಷ್ಯಾಕ್ಕೆ ಸ್ಥಳಾಂತರಗೊಂಡವು, ಅಧಿಕಾರಿಗಳು ವಿದೇಶದಿಂದ ತಂದ ತ್ಯಾಜ್ಯದಿಂದ ತುಂಬಿದ ಹೆಚ್ಚಿನ ಸಂಖ್ಯೆಯ ಹಡಗುಗಳನ್ನು ವಾಪಸ್ ಕಳುಹಿಸುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ.

ಮಲೇಶ್ಯದ ಪರಿಸರ ಸಚಿವ ಯಿಯೋ ಬೀ ಯಿನ್ ಅವರು ಬ್ರಿಟನ್‌ನ ಕ್ರಮವನ್ನು ಶ್ಲಾಘಿಸಿದ್ದಾರೆ. ಹಲವು ಆಗ್ನೇಯ ಏಶ್ಯದ ದೇಶಗಳು ಕೆಲವು ತಿಂಗಳುಗಳಿಂದ ಅನಗತ್ಯ ತ್ಯಾಜ್ಯವನ್ನು ವಾಪಸ್ ಕಳುಹಿಸಿವೆ. ಇಂಡೋನೇಶ್ಯ ನೂರಾರು ಕಸದ ಕಂಟೈನರ್‌ಗಳನ್ನು ತಮ್ಮ ಮೂಲ ದೇಶಗಳಿಗೆ ಹಿಂದಿರುಗಿಸಿದರೆ, ಫಿಲಿಪೈನ್ಸ್ ಕೆನಡಾಕ್ಕೆ ದೊಡ್ಡ ಪ್ರಮಾಣದ ಕಸವನ್ನು ವಾಪಸ್ ಕಳುಹಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News