ಲಾಹೋರ್‌ನಲ್ಲಿ ದಿಲ್ಲಿಯಂತೆ ವಾಯುಮಾಲಿನ್ಯ: ಇಮ್ರಾನ್ ಖಾನ್

Update: 2019-11-25 16:50 GMT
ಫೈಲ್ ಫೋಟೊ

ಇಸ್ಲಾಮಾಬಾದ್, ನ. 25:ಲಾಹೋರ್‌ನಲ್ಲಿ ವಾಯುಮಾಲಿನ್ಯವು ಅತ್ಯಂತ ಕೆಟ್ಟ ಮಟ್ಟವನ್ನು ತಲುಪಿದೆ, ಭಾರತದ ರಾಜಧಾನಿ ಹೊಸದಿಲ್ಲಿಯಂತೆ ‘ಸೈಲೆಂಟ್ ಕಿಲ್ಲರ್’ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಣ್ಣಿಸಿದ್ದಾರೆ.

ಲಾಹೋರ್‌ನ ಗಾಳಿಯು ಉಸಿರಾಡಲು ಯೋಗ್ಯವಾಗಿಲ್ಲ ಮತ್ತು ನಗರದ ಪರಿಸ್ಥಿತಿಗಳು ವೃದ್ಧರು ಮತ್ತು ಯುವಕರಿಗೆ ಅಪಾಯಕಾರಿ ಎಂದು ಅವರು ಹೇಳಿದರು. ಇದರಿಂದ ಎಷ್ಟು ಜನರಿಗೆ ತೊಂದರೆಯಾಗಿದೆ ಎಂದು ನಮಗೆ ತಿಳಿದಿಲ್ಲ. ದಿಲ್ಲಿ ಅತ್ಯಂತ ಕಲುಷಿತ ನಗರ ಎಂದು ನಾವು ಭಾವಿಸುತ್ತಿದ್ದೆವು ಎಂದು ಅವರು ಮತ್ತು ಲಾಹೋರ್ ಕೂಡ ಇದೇ ಮಟ್ಟವನ್ನು ತಲುಪಿದೆ ಎಂದು ಅವರು ಹೇಳಿದರು.

ಇಸ್ಲಾಮಾಬಾದ್‌ನಲ್ಲಿ ಕ್ಲೀನ್ ಗ್ರೀನ್ ಪಾಕಿಸ್ತಾನ ಸೂಚ್ಯಂಕ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ದೇಶಾದ್ಯಂತ ಹದಗೆಡುತ್ತಿರುವ ಪರಿಸರ ಸ್ಥಿತಿಯನ್ನು ಸುಧಾರಿಸುವ ಬದ್ಧತೆಯ ಬಗ್ಗೆ ತಮ್ಮ ಸರ್ಕಾರ ಸಂಪೂರ್ಣ ಗಮನ ಹರಿಸಿದೆ ಎಂದು ಹೇಳಿದರು.

ಲಾಹೋರ್‌ನಲ್ಲಿ ವಾಯುಮಾಲಿನ್ಯವು ಅತ್ಯಂತ ಕೆಟ್ಟ ಮಟ್ಟಕ್ಕೆ ತಲುಪಿದೆ ಎಂದು ಅವರು ಹೇಳಿದರು.

ನಾವು ಏನು ಮಾಡಬೇಕೆಂದು ಯಾರಿಗೂ ತೋಚುತ್ತಿಲ್ಲ ಎಂದು ಇಮ್ರಾನ್ ನುಡಿದರು. ನಾವು ನಮ್ಮ ಮರಗಳನ್ನು ಕತ್ತರಿಸುತ್ತಿದ್ದೇವೆ ಮತ್ತು ಕಳೆದ 10 ವರ್ಷಗಳಲ್ಲಿ ಲಾಹೋರ್ ನಗರದಲ್ಲಿ ಶೇ 70ರಷ್ಟು ಅರಣ್ಯನಾಶ ಮಾಡಲಾಗಿದೆ ಎಂದು ಹೇಳಿದರು.

ನಾವು ನಮ್ಮ ನದಿಗಳಿಗೆ ಕೊಳಚೆ ನೀರನ್ನು ಹೊರಹಾಕುವ ಮೂಲಕ ಹಾಳುಮಾಡಿದ್ದೇವೆ ಎಂದು ಇಮ್ರಾನ್ ಅಭಿಪ್ರಾಯಪಟ್ಟರು. ನೆರೆಯ ರಾಜ್ಯಗಳಲ್ಲಿ ತ್ಯಾಜ್ಯಗಳನ್ನು ಸುಡುತ್ತಿರುವ ಕಾರಣದಿಂದಾಗಿ ದಿಲ್ಲಿಯಲ್ಲಿ ವಾಯುಮಾಲಿನ್ಯದ ಮಟ್ಟವು ಏರಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News