ದಕ್ಷಿಣ ಚೀನಾದಲ್ಲಿ ಭೂಕಂಪ: 1 ಸಾವು , 4 ಮಂದಿ ಗಾಯ

Update: 2019-11-25 16:52 GMT

ಬೀಜಿಂಗ್, ನ.25: ದಕ್ಷಿಣ ಚೀನಾದ ಗುವಾಂಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದ ಜಿಂಗಿಕ್ಸಿ ನಗರದಲ್ಲಿ ಸಂಭವಿಸಿದ 5.2 ತೀವ್ರತೆಯ ಭೂಕಂಪದಿಂದಾಗಿ ಓರ್ವ ವ್ಯಕ್ತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ . ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭೂಕಂಪದ ಕೇಂದ್ರವು 10 ಕಿ.ಮೀ ಆಳದಲ್ಲಿ 22.89 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 106.65 ಡಿಗ್ರಿ ಪೂರ್ವ ರೇಖಾಂಶವನ್ನು ಹೊಂದಿದೆ ಎಂದು ಚೀನಾ ಭೂಕಂಪ ನೆಟ್‌ವರ್ಕ್ ಕೇಂದ್ರ ತಿಳಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭೂಕಂಪನ ಕೇಂದ್ರದ ಸಮೀಪವಿರುವ ಡಾಕ್ಸಿನ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದೆ. ಅಲ್ಲಿ ಬಲವಾದ ಭೂಕಂಪನ ಉಂಟಾಗಿದೆ ಎಂದು ತಿಳಿದು ಬಂದಿದೆ.  ಭೂಕಂಪದಿಂದ ಕೆಲವು ಮನೆಗಳು ಬಿರುಕು ಬಿಟ್ಟಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News