ನನ್ನ ತಂದೆ, ಪೂರ್ವಜರು ಬಾಂಗ್ಲಾದಿಂದ ಬಂದವರು: ಎನ್ ಆರ್ ಸಿ ಬಗ್ಗೆ ಬಿಜೆಪಿ ನಾಯಕ, ತ್ರಿಪುರಾ ಸಿಎಂ ಬಿಪ್ಲಬ್

Update: 2019-11-25 17:28 GMT

ಹೊಸದಿಲ್ಲಿ, ನ.25: ತ್ರಿಪುರಾದಲ್ಲಿ ಎನ್ ಆರ್ ಸಿ ಜಾರಿಯಾದರೆ ತಾನು ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಬೇಕಾದೀತು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ತಂದೆ ಮತ್ತು ಸಂಬಂಧಿಕರು ಬಾಂಗ್ಲಾದೇಶದಿಂದ ಬಂದವರಾಗಿದ್ದು, ಎನ್ ಆರ್ ಸಿ ಜಾರಿಯಾದಲ್ಲಿ ಅದರಿಂದ ಹೊರಗುಳಿಯುವವರಲ್ಲಿ ತಾನೂ ಸೇರಬಹುದು ಮತ್ತು ಮುಖ್ಯಮಂತ್ರಿ ಕುರ್ಚಿಯನ್ನು ಕಳೆದುಕೊಳ್ಳಬಹುದು ಎಂದು ದೇವ್ ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

"ಎನ್ ಆರ್ ಸಿ ನನ್ನ ರಾಜ್ಯದಲ್ಲಿ ಜಾರಿಯಾದರೆ .... ನನ್ನ ಸಂಬಂಧಿಕರು, ನನ್ನ ತಂದೆ ಬಾಂಗ್ಲಾದೇಶದಿಂದ ಬಂದವರು. ಅವರಿಗೆ ಪೌರತ್ವ ಕಾರ್ಡ್ ಲಭಿಸಿತ್ತು. ತದನಂತರ ನಾನು ತ್ರಿಪುರಾದಲ್ಲಿ ಜನಿಸಿದೆ. ಹಾಗಾಗಿ ಎನ್ ಆರ್ ಸಿಯಿಂದ ಯಾರಾದರೂ ನಷ್ಟ ಅನುಭವಿಸುವುದೇ ಆದರೆ ಅದು ಮೊದಲನೆಯದಾಗಿ ನನ್ನ ಸಿಎಂ ಹುದ್ದೆ ಆಗಿರಬಹುದು. ನನ್ನ ಸಿಎಂ ಸ್ಥಾನ ಕಳೆದುಕೊಳ್ಳಲು ಎನ್ ಆರ್ ಸಿ ಜಾರಿಗೊಳಿಸುವಷ್ಟು ನಾನು ಮೂರ್ಖನೇ?" ಎಂದವರು ವಿಡಿಯೋದಲ್ಲಿ ಪ್ರಶ್ನಿಸುತ್ತಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ ಗಳಲ್ಲಿ ವೈರಲ್ ಆಗಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News