ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಸ್ಟೂಡೆಂಟ್ ವಿಂಗ್ ಅಸ್ತಿತ್ವಕ್ಕೆ

Update: 2019-11-26 04:40 GMT

ಮಂಗಳೂರು, ನ.26: ಬ್ಯಾರಿ ನಿಖಾಃ ಹೆಲ್ಪ್ ಲೈನ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮಾಜ ಸೇವೆಗೈಯ್ಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಟೂಡೆಂಟ್ ವಿಂಗ್ ಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬ್ಯಾರಿ ನಿಖಾಃ ಹೆಲ್ಪ್ ಲೈನ್ ಸ್ಥಾಪಕಾಧ್ಯಕ್ಷ ರಾಶ್ ಬ್ಯಾರಿ, ವಿದ್ಯಾರ್ಥಿ ಯುವ ಸಮೂಹವು ದಾರಿತಪ್ಪದಂತೆ ಜಾಗೃತರಾಗಬೇಕು.  ಸಾಮಾಜಿಕ ಸೇವಾ ರಂಗಕ್ಕೆ ಆಕರ್ಷಿತರಾಗಿ ಜನಪರ ಹಿತಕ್ಕಾಗಿ ಶ್ರಮಿಸಬೇಕು ಎಂದರು.

ಸ್ಟೂಡೆಂಟ್ ವಿಂಗ್ ನ ಕಾರ್ಯನಿರ್ವಾಹಕರಾಗಿ ಮುನಾಝ್ ಅಹ್ಮದ್ ರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಕಲ್ಲಡ್ಕರಿಗೆ ಬೆಸ್ಟ್ ಕಮ್ಯೂನಿಟಿ ಸರ್ವೀಸ್ ಅವಾರ್ಡ್-2019 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಟೀ-ಶರ್ಟ್ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಪದಾಧಿಕಾರಿಗಳಾದ ಸುಹೈಲ್ ತೊಕ್ಕೊಟ್ಟು, ಮಜೀದ್ ಬಿಕರ್ನಕಟ್ಟೆ, ಸೈಫ್ ಕುತ್ತಾರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News