ನಮ್ಮ ಸಂವಿಧಾನದ ಬಗ್ಗೆ ಗಣ್ಯರ ಅಭಿಪ್ರಾಯಗಳು
ಭಾರತ ದೇಶದಿಂದ ನಾನೇನಾದರೂ ತೆಗೆದುಕೊಂಡು ಹೋಗಲು ಇಚ್ಛಿಸುವುದಾದರೆ ಅದು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಮಾತ್ರ.
- ಡಾ. ನೆಲ್ಸನ್ ಮಂಡೇಲಾ ದ.ಆಫ್ರಿಕಾದ ಮಾಜಿ ಅಧ್ಯಕ್ಷ
***
ಭಾರತದ ಸಂವಿಧಾನದ ರಚನೆಯ ಕಾರ್ಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದರು. ಈ ಕಾರ್ಯದಲ್ಲಿ ಈ ದೇಶದ ಯಾವೊಬ್ಬ ವ್ಯಕ್ತಿಯೂ ಇವರಷ್ಟು ತೊಡಗಿಕೊಂಡಿರಲಿಲ್ಲ. ಪ್ರಬುದ್ಧ ವಿಚಾರವಂತರೂ, ವೈಜ್ಞಾನಿಕ ಮನೋಭಾವವುಳ್ಳವರೂ ಅಲ್ಲದೆ ಘನ ವಿದ್ವಾಂಸರೂ ಆದ ಡಾ. ಬಿ.ಆರ್. ಆಂಬೇಡ್ಕರ್ ಜಾತ್ಯತೀತ ಅಖಂಡ ನವಭಾರತ ನಿರ್ಮಿಸಲು ಈ ಸಂವಿಧಾನದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
- ಜವಾಹರಲಾಲ್ ನೆಹರೂ, ಭಾರತದ ಪ್ರಥಮ ಪ್ರಧಾನ ಮಂತ್ರಿ
***
ಡಾ. ಬಿ. ಆರ್. ಅಂಬೇಡ್ಕರ್‌ರವರೇನಾದರೂ ನಮ್ಮ ದೇಶದಲ್ಲಿ ಜನಿಸಿದ್ದರೆ ಅವರ ಜ್ಞಾನವನ್ನು ನಮ್ಮ ದೇಶದ ಸಮಗ್ರ ಅಭಿವೃದ್ಧಿಗಾಗಿ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದೆ.
- ವಿನ್‌ಸ್ಟನ್ ಚರ್ಚಿಲ್, ಬ್ರಿಟನ್ ಮಾಜಿ ಪ್ರಧಾನಿ.
***
ಡಾ. ಬಿ.ಆರ್. ಅಂಬೇಡ್ಕರ್ ರವರು ಆಧುನಿಕ ಭಾರತದ ಸ್ಥಾಪಕ ಪಿತಾಮಹರಾಗಿದ್ದಾರೆ. ಡಾ. ಅಂಬೇಡ್ಕರ್‌ರವರು ರಚಿಸಿದ ಶಕ್ತಿಶಾಲಿ ಸಂವಿಧಾನವು ಇಂದು ವಿಶ್ವದ ಮಾದರಿ ಸಂವಿಧಾನವಾಗಿದೆ.
- ಬರಾಕ್ ಒಬಾಮ, ಅಮೆರಿಕದ ಮಾಜಿ ಅಧ್ಯಕ್ಷ
***
ಡಾ. ಬಿ.ಆರ್. ಅಂಬೇಡ್ಕರ್‌ರವರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ.
- ಪಂಡಿತ್ ಠಾಕೂರ್‌ದಾಸ್ ಭಾರ್ಗವ, ಲೋಕಸಭಾ ಸದಸ್ಯ
***
ಸಂವಿಧಾನ ಕರಡು ಸಮಿತಿಗೆ ನೇಮಿಸಿದ 7 ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಾಗವನ್ನು ಮತ್ತೆ ತುಂಬಲಾಯಿತು. ಎಂಬುದು ಈ ಸದನಕ್ಕೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನಪ್ಪಿದರು ಮತ್ತೆ ಆ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೆರಿಕದಲ್ಲಿ ಇದ್ದರು ಅವರ ಜಾಗವನ್ನು ಬೇರೆಯವರಿಂದ ತುಂಬಲಿಲ್ಲ. ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು. ಮತ್ತೆ ಒಬ್ಬರು ಅಥವಾ ಇಬ್ಬರು ದಿಲ್ಲಿಯಿಂದ ದೂರವೇ ಉಳಿದರು. ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ. ಅಂಬೇಡ್ಕರ್ ಅವರ ಮೇಲೆ ಬಿತ್ತು. ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು.
- ಟಿ. ಟಿ. ಕೃಷ್ಣಮಾಚಾರಿ, ಸಂವಿಧಾನ ಕರಡು ರಚನಾ ಸಮಿತಿ ಸದಸ್ಯರು
---------------------------
-ರಂಗಧಾಮಯ್ಯ ಜೆ. ಸಿ., ಜನಕಲೋಟಿ