ಬೇರೆ ವಿಭಾಗಗಳಿಗೆ ಅರ್ಜಿ ಸಲ್ಲಿಸಿಲ್ಲ: ಬನಾರಸ್ ಹಿಂದು ವಿವಿ ಸಂಸ್ಕೃತ ಪ್ರೊ. ಫಿರೋಝ್ ಖಾನ್
Update: 2019-11-26 16:53 IST
ಹೊಸದಿಲ್ಲಿ: ಸಂಸ್ಕೃತ ವಿಭಾಗಕ್ಕೆ ತಮ್ಮ ನೇಮಕಾತಿ ಕುರಿತಂತೆ ಎದ್ದಿರುವ ವಿವಾದವನ್ನು ಅಂತ್ಯಗೊಳಿಸಲು ಬನಾರಸ್ ಹಿಂದು ವಿಶ್ವವಿದ್ಯಾಲಯದ ಇತರ ವಿಭಾಗಗಳಲ್ಲಿ ಉದ್ಯೋಗಕ್ಕೆ ತಾವು ಅರ್ಜಿ ಸಲ್ಲಿಸಿಲ್ಲ ಎಂದು ವಿವಿಯ ಸಂಸ್ಕೃತ ಪ್ರೊಫೆಸರ್ ಫಿರೋಝ್ ಖಾನ್ ಹೇಳಿದ್ದಾರಲ್ಲದೆ ಈ ಕುರಿತಂತೆ ಕೆಲ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ.
"ಮೇ ತಿಂಗಳಲ್ಲಿ ಮೂರು ಪ್ರತ್ಯೇಕ ವಿಭಾಗಗಳಿಗೆ ಅರ್ಜಿ ಸಲ್ಲಿಸಿದ್ದೆ. ಇವುಗಳು ಬನಾರಸ್ ಹಿಂದು ವಿವಿಯ ಆಯುರ್ವೇದ ವಿಭಾಗ, ಸಂಸ್ಕೃತ ಹಾಗೂ ಕಲಾ ವಿಭಾಗಗಳಾಗಿವೆ. ಇವುಗಳ ಹೊರತಾಗಿ ಸಂಸ್ಕೃತ ವಿದ್ಯಾ ಧರ್ಮ ಸಂಕಯ್ ವಿಭಾಗಕ್ಕೂ ಅರ್ಜಿ ಸಲ್ಲಿಸಿದ್ದೆ. ಆದರೆ ಈಗಿನ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿಲ್ಲ. ವರದಿಗಳು ತಪ್ಪು,'' ಎಂದು ಫಿರೋಝ್ ಖಾನ್ ಹೇಳಿದರು.
ಈ ಕುರಿತು ಸಂಸ್ಕೃತ ವಿಭಾಗದಲ್ಲಿ ಸಂಸ್ಕೃತ ಸಾಹಿತ್ಯ ಹಾಗೂ ಕಾವ್ಯ ಪ್ರೊಫೆಸರ್ ಆಗಿರುವ ಲತಾ ಶರ್ಮ ಕೂಡ ದೃಢ ಪಡಿಸಿದ್ದಾರೆ.