ಬಾಲ್ಯವಿವಾಹ ತಡೆ ಕಾಯ್ದೆಗೆ ತಿದ್ದುಪಡಿ: ಸ್ಮೃತಿ ಇರಾನಿ

Update: 2019-11-26 15:17 GMT
PTI

ಹೊಸದಿಲ್ಲಿ, ನ.26: ಬಾಲ್ಯವಿವಾಹ ತಡೆ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು ಬಾಲ್ಯವಿವಾಹದ ಪ್ರಕರಣಗಳನ್ನು ಸಂಬಂಧಿಸಿದ ಸಂಸ್ಥೆಗಳು ಕಡ್ಡಾಯವಾಗಿ ವರದಿ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

18ರ ಕೆಳಹರೆಯದ ವಿವಾಹಿತ ಯುವತಿಯರು ಗರ್ಭಿಣಿಯಾಗುತ್ತಿರುವ ಪ್ರಕರಣ ಹೆಚ್ಚಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಲ್ಯವಿವಾಹ ತಡೆ ಕಾಯ್ದೆಗೆ ತಿದ್ದುಪಡಿ ತಂದು ಇಂತಹ ಪ್ರಕರಣಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

18 ವರ್ಷಕ್ಕಿಂತ ಕೆಳಗಿನ ಯುವತಿಯರು ಗರ್ಭಿಣಿಯಾಗುವ ಪ್ರಮಾಣ 21% ಕ್ಕೆ ತಲುಪಿದ್ದು , ಬಾಲ್ಯ ವಿವಾಹದಿಂದ ಜನಿಸುವ ಮಕ್ಕಳು ಅಪೌಷ್ಠಿಕತೆಯ ಸಮಸ್ಯೆಗೆ ಈಡಾಗುವ ಸಾಧ್ಯತೆ ಅಧಿಕ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News