ತೀರ್ಪು ಬೇಡ ಎಂದ ಮುಶರ್ರಫ್ ಅರ್ಜಿಯ ವಿಚಾರಣೆಗೆ ಒಪ್ಪಿಗೆ
Update: 2019-11-26 21:23 IST
ಲಾಹೋರ್, ನ. 26: ತನ್ನ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವೊಂದು ಗುರುವಾರ ತೀರ್ಪು ನೀಡುವುದನ್ನು ತಡೆಯುವಂತೆ ಕೋರಿ ಪಾಕಿಸ್ತಾನದ ಮಾಜಿ ಸೇನಾಡಳಿತಗಾರ ಪರ್ವೇಝ್ ಮುಶರ್ರಫ್ ಸಲ್ಲಿಸಿರುವ ಮನವಿಯನ್ನು ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಮನವಿಯನ್ನು ವಿಚಾರಣೆ ನಡೆಸಲು ಲಾಹೊರ್ ಹೈಕೋರ್ಟ್ ಮಂಗಳವಾರ ಒಪ್ಪಿದೆ.
ಲಾಹೋರ್ ಹೈಕೋರ್ಟ್‌ನ ನ್ಯಾಯಾಧೀಶ ಸೈಯದ್ ಮಝರ್ ಅಲಿ ಅಕ್ಬರ್ ನಖ್ವಿ, ದುಬೈಯಲ್ಲಿ ನೆಲೆಸಿರುವ ಮುಶರ್ರಫ್‌ರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದರು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.
ಅದೇ ವೇಳೆ, ಇದೇ ಪ್ರಕರಣದಲ್ಲಿ ವಿಶೇಷ ನ್ಯಾಯಮಂಡಳಿಯು ತೀರ್ಪು ನೀಡುವುದನ್ನು ತಡೆಯುವಂತೆ ಕೋರಿ ಆಂತರಿಕ ಸಚಿವಾಲಯವು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲೂ ಪ್ರತ್ಯೇಕ ಮನವಿಯೊಂದನ್ನು ಸಲ್ಲಿಸಿದೆ.