ಆಡಳಿತದಲ್ಲಿ ಕೊರತೆ ಒಪ್ಪಿಕೊಂಡ ಹಾಂಕಾಂಗ್ ಮುಖ್ಯಾಧಿಕಾರಿ

Update: 2019-11-26 16:02 GMT

ಹಾಂಕಾಂಗ್, ನ. 26: ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಪರ ಅಭ್ಯರ್ಥಿಗಳು ಭಾರೀ ಯಶಸ್ಸು ಗಳಿಸಿರುವುದು, ತನ್ನ ಆಡಳಿತದಲ್ಲಿ ಜನರು ಹೊಂದಿರುವ ಅತೃಪ್ತಿಯನ್ನು ಸೂಚಿಸುತ್ತದೆ ಎನ್ನುವುದನ್ನು ಹಾಂಕಾಂಗ್ ಆಡಳಿತಾಧಿಕಾರಿ ಕ್ಯಾರೀ ಲ್ಯಾಮ್ ಮಂಗಳವಾರ ಒಪ್ಪಿಕೊಂಡಿದ್ದಾರೆ.

ರವಿವಾರ 452 ಡಿಸ್ಟ್ರಿಕ್ಟ್ ಕೌನ್ಸಿಲ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ 90 ಶೇಕಡ ಸ್ಥಾನಗಳನ್ನು ಪ್ರಜಾಪ್ರಭುತ್ವಪರ ಅಭ್ಯರ್ಥಿಗಳು ಗೆದ್ದಿದ್ದಾರೆ. ‘‘ಸರಕಾರದಲ್ಲಿನ ವೈಫಲ್ಯಗಳು ಸೇರಿದಂತೆ ನಗರದ ಜನತೆ ಹಲವು ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ’’ ಎಂದು ಲ್ಯಾಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News