ವಿವಾದಾತ್ಮಕ ತೃತೀಯ ಲಿಂಗಿಗಳ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

Update: 2019-11-26 16:41 GMT
PTI

ಹೊಸದಿಲ್ಲಿ, ನ. 26: ತೃತೀಯಲಿಂಗಿ (ಹಕ್ಕುಗಳ ರಕ್ಷಣೆ)ಗಳ ಮಸೂದೆ-2019 ರಾಜ್ಯಸಭೆಯಲ್ಲಿ ಮಂಗಳವಾರ ಧ್ವನಿಮತದ ಮೂಲಕ ಯಾವುದೇ ತಿದ್ದುಪಡಿ ಇಲ್ಲದೆ ಅಂಗೀಕಾರಗೊಂಡಿದೆ. ಸಂಸತ್ತಿನ ಮನ್ಸೂನ್ ಅಧಿವೇಶನದ ಆಗಸ್ಟ್ 5ರಂದು ಈ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತ್ತು.

ಸಾಮಾಜಿಕ ನ್ಯಾಯ ಸಚಿವ ತಾವರಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸಿದ್ದರು.

ರಾಜೀವ್ ಗೌಡ ಹಾಗೂ ತಿರುಚಿ ಸಿವ ಸಹಿತ ಸಂಸದರು ಪ್ರಮುಖ ತಿದ್ದುಪಡಿಗೆ ಕೋರಿದ ಹೊರತಾಗಿಯೂ ಮಸೂದೆಯನ್ನು ಯಾವುದೇ ಬದಲಾವಣೆ ಇಲ್ಲದೆ ಅಂಗೀಕರಿಸಲಾಯಿತು.

 ಈ ಮಸೂದೆ ತೃತೀಯ ಲಿಂಗಗಳ ಹಕ್ಕುಗಳ ರಕ್ಷಣೆ ಹೆಸರಲ್ಲಿ ಮತ್ತಷ್ಟು ತಾರತಮ್ಯ ಹಾಗೂ ಕಳಂಕವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ತೃತೀಯ ಲಿಂಗಿ ಹೋರಾಟಗಾರರು ವ್ಯಾಪಕವಾಗಿ ಟೀಕೆ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News