ಜಮ್ಮುಕಾಶ್ಮೀರದ 177 ಬಂಧಿತರಲ್ಲಿ ಓರ್ವ ಮಾತ್ರ ಬಿಜೆಪಿ ರಾಜಕಾರಣಿ

Update: 2019-11-26 17:18 GMT
PTI

ಹೊಸದಿಲ್ಲಿ, ಜ. 26: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಬಂಧಿತರಾದ 177 ರಾಜಕಾರಣಿಗಳಲ್ಲಿ ಕೇವಲ ಓರ್ವ ಮಾತ್ರ ಬಿಜೆಪಿ ರಾಜಕಾರಣಿ.

ಬಂಧಿತರಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ 71, ಪಿಡಿಪಿಯ 35, ಎರಡು ಮುಖ್ಯವಾಹಿನಿಯ ಪ್ರಾದೇಶಿಕ ರಾಜಕೀಯ ಪಕ್ಷಗಳ ಇಬ್ಬರು, ಕಾಂಗ್ರೆಸ್‌ನ 19, ಮಾಜಿ ಐಎಎಸ್ ಅಧಿಕಾರಿ ಶಾಹ್ ಫಾಝಿಲ್‌ರ ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ (ಜೆಕೆಪಿಎಂ)ನ 28, ಸಜ್ಜಾದ್ ಗನಿ ಲೋನೆಯ ಪೀಪಲ್ಸ್ ಕಾನ್ಫರೆನ್ಸ್‌ನ 10 ಹಾಗೂ ಅವಾಮಿ ಇತೆಹಾದ್ ಪಕ್ಷ (ಎಐಪಿ) ದ 8 ರಾಜಕಾರಣಿಗಳು ಸೇರಿದ್ದಾರೆ.

ಹೆಚ್ಚಿನ ರಾಜಕಾರಣಿಗಳನ್ನು ಬಂಡಿಪೋರದಿಂದ ಬಂಧಿಸಲಾಗಿದೆ. ಅನಂತರ ಅನುಕ್ರಮವಾಗಿ ಶ್ರೀನಗರ, ಕುಪ್ವಾರ ಹಾಗೂ ಗಂದೇರ್‌ಬಾಲ್‌ನಿಂದ ಬಂಧಿಸಲಾಗಿದೆ. ಬಂಧಿತ ಬಿಜೆಪಿ ರಾಜಕಾರಣಿ ಸೋಪೊರೆಯವರು ಎಂದು ‘ಪ್ರಿಂಟ್‌’ಗೆ ದೊರೆತ ದಾಖಲೆ ಹೇಳಿದೆ.

ಕಾಶ್ಮೀರದಲ್ಲಿ ಒಟ್ಟು 4,844 ಜನರನ್ನು ಬಂಧಿಸಲಾಗಿದೆ. ಇವರಲ್ಲಿ 1,281 ಜನರು ಸೆಪ್ಟಂಬರ್ ಅಂತ್ಯದ ವರೆಗೆ ಕಸ್ಟಡಿಯಲ್ಲಿ ಇರಲಿದ್ದಾರೆ. 3,563 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ದಾಖಲೆಗಳು ತಿಳಿಸಿವೆ. ಸೆಪ್ಟಂಬರ್ 30 ವರೆಗಿನ ದತ್ತಾಂಶವನ್ನು ಒಳಗೊಂಡ ಈ ದಾಖಲೆಗಳನ್ನು ಭದ್ರತಾ ಸಂಸ್ಥೆಯ ಮೂಲಕ ಪಡೆಯಲಾಗಿದೆ.

4,844 ಬಂಧಿತರಲ್ಲಿ 4,062 ಕಲ್ಲು ತೂರಾಟಗಾರರು, 156 ಸಾಮಾನ್ಯ ಕಾರ್ಯಕರ್ತರು. 117 ಹುರಿಯತ್/ಜಮಾತ್ ಎ ಇಸ್ಲಾಮಿಯ ಸ್ವಯಂ ಸೇವಕರು ಹಾಗೂ ಕಾರ್ಯಕರ್ತರು, 13 ರಾಜಕಾರಣಿಗಳಲ್ಲದವರು, 118 ‘ಬಿಡುಗಡೆಗೊಂಡಿದ್ದ ತೀವ್ರವಾದಿಗಳು’ ಹಾಗೂ 151 ಸಾಮಾನ್ಯ ಜನರು ಎಂದು ದತ್ತಾಂಶ ಬಹಿರಂಗಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News