ಖಾಸಗೀಕರಣಗೊಳಿಸದಿದ್ದರೆ ಏರ್ ಇಂಡಿಯಾ ನಿರ್ವಹಣೆ ಕಷ್ಟ: ಕೇಂದ್ರ ಸಚಿವ

Update: 2019-11-27 12:48 GMT

ಹೊಸದಿಲ್ಲಿ, ನ.27: ಏರ್‌ಇಂಡಿಯಾವನ್ನು ಖಾಸಗೀಕರಣಗೊಳಿಸದಿದ್ದರೆ ಮುಂದಿನ ದಿನದಲ್ಲಿ ಸಂಸ್ಥೆಯನ್ನು ನಿರ್ವಹಿಸಲು ಕಷ್ಟವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.

 ಖಾಸಗೀಕರಣಗೊಳಿಸದಿದ್ದರೆ ಸಂಸ್ಥೆಯನ್ನು ನಿರ್ವಹಿಸಲು ಹಣ ಎಲ್ಲಿಂದ ಬರುತ್ತದೆ? ಈ ಹಿಂದೆ ನಿರ್ವಹಣಾ ನಷ್ಟವನ್ನು ಭರಿಸಲು ನಾವು ವಿತ್ತ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸುತ್ತಿದ್ದೆವು. ವಿತ್ತ ಸಚಿವಾಲಯದಿಂದ ಹಣ ಸಿಗದಿದ್ದರೆ ಬ್ಯಾಂಕ್‌ಗಳ ಬಳಿ ಹೋಗಬೇಕು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವರು ಹೇಳಿದರು. ಈಗ ಏರ್‌ಇಂಡಿಯಾ ಪ್ರಥಮದರ್ಜೆಯ ಆಸ್ತಿಯಂತಿದೆ. ಈಗ ಮಾರಾಟ ಮಾಡಿದರೆ ಖರೀದಿಸಲು ಆಸಕ್ತಿ ತೋರುತ್ತಾರೆ. ಆದರೆ ಏರ್‌ಇಂಡಿಯಾವನ್ನು ಮಾರಾಟ ಮಾಡಬಾರದು ಎಂಬ ಸೈದ್ಧಾಂತಿಕ ನಿಲುವಿಗೆ ಅಂಟಿಕೊಂಡರೆ ಭವಿಷ್ಯದಲ್ಲಿ ಇದನ್ನು ನಿರ್ವಹಿಸುವುದು ಕಷ್ಟಕರ ಎಂದವರು ಹೇಳಿದ್ದಾರೆ.

 ಏರ್‌ಇಂಡಿಯಾ ಸಂಸ್ಥೆಯ ಉದ್ಯೋಗಿಗಳಿಗೆ ನ್ಯಾಯ ಒದಗಿಸಲು ಸರಕಾರ ಬದ್ಧವಾಗಿದೆ. ಏರ್‌ಇಂಡಿಯಾವನ್ನು ಖರೀದಿಸುವವರಿಗೂ ಇಂತಹ ತರಬೇತಿ ಹೊಂದಿದ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News