ಭಾರತದಲ್ಲಿ ಅಂಕಿಅಂಶದ ವಿಶ್ವಾಸಾರ್ಹತೆ ಆಪತ್ತಿನಲ್ಲಿ: ಶಶಿ ತರೂರ್

Update: 2019-11-27 12:55 GMT
PTI

ಹೊಸದಿಲ್ಲಿ, ನ.27: ಭಾರತದಲ್ಲಿ ಅಂಕಿಅಂಶದ ವಿಶ್ವಾಸಾರ್ಹತೆಗೆ ತೀವ್ರ ಆಪತ್ತು ಎದುರಾಗಿದ್ದು ಈ ಬಿಕ್ಕಟ್ಟು ನಿವಾರಣೆಗೆ ಸರಕಾರ ಪರಿಶೀಲನಾ ಸಮಿತಿಯೊಂದನ್ನು ರಚಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಸರಕಾರ ಅಂಕಿಅಂಶಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿರುವ ಕಾರಣ ದೇಶದ ಅಂಕಿಅಂಶದ ವಿಶ್ವಾಸಾರ್ಹತೆಗೆ ಬಿಕ್ಕಟ್ಟು ಎದುರಾಗಿದೆ. ಉದಾಹರಣೆಗೆ , ಜಿಡಿಪಿ ಅಭಿವೃದ್ಧಿ ದರವನ್ನು 6.7%ದಿಂದ 8.2%ಕ್ಕೆ ಪರಿಷ್ಕರಿಸಿರುವುದನ್ನು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರೇ ಪ್ರಶ್ನಿಸಿದ್ದಾರೆ. ಈ ಗೊಂದಲ ನಿವಾರಿಸಲು ಸರಕಾರ ಸ್ವತಂತ್ರ ತಜ್ಞರ ಪರಿಶೀಲನಾ ಸಮಿತಿಯನ್ನು ರಚಿಸಬೇಕು . ಅಂಕಿಅಂಶ ಸಂಗ್ರಹಿಸುವ ಪ್ರಕ್ರಿಯೆ ಹಾಗೂ ಅಂಕಿಅಂಶ ಸಂಗ್ರಹಿಸುವ ಮೂಲದ ಬಗ್ಗೆ ಈ ಸಮಿತಿ ಸಲಹೆ ನೀಡಬೇಕು ಎಂದು ತರೂರ್ ಅಭಿಪ್ರಾಯಪಟ್ಟರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ಮಾತನಾಡಿದರು.

ಇದಕ್ಕೆ ಉತ್ತರಿಸಿದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಹಾಯಕ ಸಚಿವ ರಾವ್ ಇಂದರ್‌ಜಿತ್ ಸಿಂಗ್ , ಈ ವಿಷಯದಲ್ಲಿರುವ ಲೋಪದೋಷದ ಬಗ್ಗೆ ಸರಕಾರಕ್ಕೆ ಅರಿವಿದ್ದು ನ್ಯೂನತೆಯನ್ನು ನಿವಾರಿಸುವ ಕ್ರಮದ ಬಗ್ಗೆ ಗಮನ ಹರಿಸಲಾಗುವುದು. ಅಂಕಿಅಂಶ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದ್ದು ಇದನ್ನು ಸುಧಾರಣೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈ ಕುರಿತ ಯಾವುದೇ ಸಲಹೆಯನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News