×
Ad

ಪ್ರಜ್ಞಾ ಸಿಂಗ್ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಯುಪಿಎ ನಿರ್ಧಾರ

Update: 2019-11-28 22:01 IST

ಹೊಸದಿಲ್ಲಿ, ನ.28: ಮಹಾತ್ಮಾ ಗಾಂಧಿಯವರ ಹಂತಕ ನಾಥುರಾಮ ಗೋಡ್ಸೆ ದೇಶಭಕ್ತನಾಗಿದ್ದ ಎಂಬ ಹೇಳಿಕೆಗಾಗಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಲೋಕಸಭೆಯಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸಜ್ಜಾಗಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ಗುರುವಾರ ಇಲ್ಲಿ ತಿಳಿಸಿದವು.

ಗೋಡ್ಸೆ ಕುರಿತು ಅನಗತ್ಯ ಹೇಳಿಕೆಗಾಗಿ ಠಾಕೂರ್ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಕಾಂಗ್ರೆಸ್ ನೇತೃತ್ವ ವಹಿಸಿದೆ. ಕಾಂಗ್ರೆಸ್ ಜೊತೆ ಡಿಎಂಕೆ,ಎನ್‌ಸಿಪಿ,ಆರ್‌ಜೆಡಿ,ಐಯುಎಂಎಲ್ ಸೇರಿದಂತೆ ಯುಪಿಎ ಅಂಗಪಕ್ಷಗಳು ಮತ್ತು ಇತರ ಕೆಲವು ಪಕ್ಷಗಳ ಸಂಸದರು ಸೇರಿ ಲೋಕಸಭಾ ಸ್ಪೀಕರ್ ಅವರ ಮುಂದೆ ಖಂಡನಾ ನಿರ್ಣಯವನ್ನು ಮಂಡಿಸಲಿದ್ದಾರೆ ಎಂದು ಅವು ಹೇಳಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News