ಸವಣಾಲು: ಎಸ್ಕೆಎಸ್ಸೆಸ್ಸೆಫ್ ‘ವಿಖಾಯ’ದಿಂದ ಸ್ವಚ್ಛತಾ ಕಾರ್ಯಕ್ರಮ

Update: 2019-11-29 04:58 GMT

ಬೆಳ್ತಂಗಡಿ, ನ.29: ಸವಣಾಲು ಎಸ್ಕೆಎಸ್ಸೆಸ್ಸೆಫ್ ನ ವಿಖಾಯ ತಂಡವು ಇತ್ತೀಚೆಗೆ ಸವಣಾಲಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಮುತ್ತಲಿನ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ವಿಖಾಯ ಸದಸ್ಯರು ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಮುಂಭಾಗದಲ್ಲಿ ಕಾಂಕ್ರಿಟ್ ಕೆಲಸ, ಸುತ್ತಮುತ್ತಲಿದ್ದ ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ  ಜಿ.ಮಂಜುನಾಥ ವಿಖಾಯದ ಸೇವಾ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಏಮಣ್ಣ, ಎಸ್ಕೆಎಸ್ಸೆಸ್ಸೆಫ್ ಸವಣಾಲು ಯೂನಿಟ್ ಅಧ್ಯಕ್ಷ ಎನ್.ಉಸ್ಮಾನ್, ಹಿಮಾಯತುಲ್ ಇಸ್ಲಾಂ ಮದ್ರಸ ಆಡಳಿತ ಕಮಿಟಿಯ ಗೌರವಾಧ್ಯಕ್ಷ ಅಬ್ದುಲ್ ಖಾದರ್, ಸವಣಾಲು ಗ್ರಾಮ ಪೊಲೀಸ್ ಜಗದೀಶ್, ಅಡ್ವೊಕೇಟ್ ಕಿರಣ್ ಕುಮಾರ್, ಉದ್ಯಮಿ ರಾಜೇಶ್ ಭಟ್ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News