ಈ ಕಂಪೆನಿಯಲ್ಲಿ ನಿದ್ದೆ ಮಾಡುವವರಿಗೆ 1 ಲಕ್ಷ ರೂ. ವೇತನ!

Update: 2019-11-29 12:28 GMT
Photo: metro.co.uk

ಹೊಸದಿಲ್ಲಿ: ಸದಾ ನಿದ್ದೆ ಮಾಡಲು ಇಚ್ಛಿಸುವವರಿಗೊಂದು ಸಿಹಿ ಸುದ್ದಿಯಿದೆ. ಇಂತಹವರಿಗೆ ಇಂಟರ್ನ್‍ ಶಿಪ್ ಒದಗಿಸಲು ಭಾರತದ ಸ್ಟಾರ್ಟ್-ಅಪ್ ಕಂಪೆನಿಯೊಂದು ಮುಂದೆ ಬಂದಿದೆ. ವೇತನ 1 ಲಕ್ಷ ರೂ. ಇಲ್ಲಿ ನಿಮಗೆ ಮಾಡಲು ಇರುವ ಕೆಲಸ ಒಂದೇ.. 'ನಿದ್ದೆ ಮಾಡುವುದು'. 

ಸ್ಲೀಪ್ ಸೊಲ್ಯೂಶನ್ಸ್ ಸ್ಟಾರ್ಟ್-ಅಪ್ ಸಂಸ್ಥೆ ವೇಕ್ ಫಿಟ್ ತನ್ನ ಸ್ಲೀಪ್ ಇಂಟರ್ನ್ ಶಿಪ್ 2020 ಬ್ಯಾಚ್‍ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಕಂಪೆನಿಯ ವೆಬ್‍ ಸೈಟ್‍ ನಲ್ಲಿ ಈ ಆಫರ್ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಬೇಕಾದ ಅರ್ಹತೆ, ನಿದ್ದೆ ಮಾಡುವ ಇಚ್ಛೆ ಹಾಗೂ ಸಾಮರ್ಥ್ಯ. ಅತ್ಯಂತ ಕಡಿಮೆ ಅವಧಿಯೊಳಗೆ ನಿದ್ದೆಗೆ ಜಾರುವವರಿಗೆ ಪ್ರಾಶಸ್ತ್ಯ. ಅಷ್ಟೇ ಅಲ್ಲ, ಈ ಕನಸಿನ ಉದ್ಯೋಗಕ್ಕೆ ವಸ್ತ್ರ ಸಂಹಿತೆ 'ಪೈಜಾಮ' ಆಗಿದೆ.

ಈ ಕೆಲಸದ ಭಾಗವಾಗಿ ಪ್ರತಿ ರಾತ್ರಿ ಒಂಬತ್ತು ಗಂಟೆ ಅವಧಿ ನಿದ್ದೆ ಮಾಡಬೇಕಿದ್ದು, ಒಟ್ಟು ನೂರು ದಿನಗಳ ಕಾಲ ಹೀಗೆ ಮಾಡಿದರೆ ರೂ 1 ಲಕ್ಸ ಸ್ಟೈಪೆಂಡ್ ದೊರೆಯಲಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರ ನಿದ್ದೆಯ ಶೈಲಿಗೆ ಸಂಸ್ಥೆ ಗಮನ ನೀಡಲಿದೆ ಹಾಗೂ ಅವರಿಗೆ  ಕೌನ್ಸೆಲಿಂಗ್ ಹಾಗೂ ಸ್ಲೀಪ್ ಟ್ರ್ಯಾಕರ್ ಒದಗಿಸಲಿದೆ. ಕಂಪೆನಿಯ ಮ್ಯಾಟ್ರೆಸ್ ಬಳಸಿದ ನಂತರ ಅಭ್ಯರ್ಥಿಗಳ ನಿದ್ದೆ ಮಾಡುವ ರೀತಿಯನ್ನು ಅಧ್ಯಯನ ನಡೆಸಲು ಕಂಪೆನಿ ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News