ಮತ್ತೆ ಕುಸಿದ ಭಾರತದ ಜಿಡಿಪಿ: 6 ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ

Update: 2019-11-29 17:59 GMT

ಹೊಸದಿಲ್ಲಿ, ನ.29: ಜುಲೈ-ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ದರ 4.5%ಕ್ಕೆ ಕುಸಿದಿದೆ ಎಂದು ಸರಕಾರ ಶುಕ್ರವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ದರ 7% ಆಗಿತ್ತು.

ಆರು ವರ್ಷಗಳಲ್ಲೇ ಇದು ಅತ್ಯಂತ ಹಿನ್ನಡೆಯಾಗಿದ್ದು, 2013ರಲ್ಲಿ ಜಿಡಿಪಿ 4.3 ಶೇಕಡಕ್ಕೆ ಕುಸಿದಿತ್ತು. 

ಸೆಪ್ಟೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ 8 ಪ್ರಮುಖ ಉದ್ದಿಮೆಗಳ ಉತ್ಪಾದನೆ 5.8%ದಷ್ಟು ಕಡಿಮೆಯಾಗಿದ್ದು ಇದು ಆರ್ಥಿಕ ಹಿಂಜರಿತದ ಗಂಭೀರತೆಯನ್ನು ಸೂಚಿಸುತ್ತದೆ ಎಂದು ಸರಕಾರದ ವರದಿ ತಿಳಿಸಿದೆ. ಅಕ್ಟೋಬರ್‌ನಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ 17.6% ಕುಸಿತ, ಕಚ್ಛಾ ತೈಲ ಉತ್ಪಾದನೆಯಲ್ಲಿ 5.1% ಕುಸಿತ, ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ 5.7% ಕುಸಿತವಾಗಿದೆ. ಉಳಿದಂತೆ ಸಿಮೆಂಟ್ ಉತ್ಪಾದನೆಯಲ್ಲಿ 7.7%, ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ 12.4%, ರಿಫೈನರಿ ಉತ್ಪನ್ನಗಳ ಉತ್ಪಾದನೆಯಲ್ಲಿ 0.4% ಕುಸಿತವಾಗಿದೆ. ಆದರೆ ರಸಗೊಬ್ಬರ ಉತ್ಪಾದನೆಯಲ್ಲಿ , ಕಳೆದ ವರ್ಷಕ್ಕೆ ಹೋಲಿಸಿದರೆ 11.8% ಹೆಚ್ಚಳವಾಗಿದೆ.

2018ರ ಅಕ್ಟೋಬರ್‌ನಲ್ಲಿ ಎಂಟು ಪ್ರಮುಖ ಕ್ಷೇತ್ರಗಳ ಉತ್ಪಾದನೆ 4.8%ದಷ್ಟು ಹೆಚ್ಚಳವಾಗಿತ್ತು ಎಂದು ಸರಕಾರದ ಅಂಕಿ ಅಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News