'ಇವಿಎಂಗಳಿಂದ ಏನು ಬೇಕಾದರೂ ಮಾಡಬಹುದು': ಪ.ಬಂಗಾಳ ಚುನಾವಣೆ ಸೋಲಿನ ಬಗ್ಗೆ ಬಿಜೆಪಿ
Update: 2019-11-29 19:22 IST
ಹೊಸದಿಲ್ಲಿ, ನ.29: ಪಶ್ಚಿಮ ಬಂಗಾಳದ ವಿಧಾನಸಭಾ ಉಪಚುನಾವಣೆಯಲ್ಲಿ 3 ಕ್ಷೇತ್ರಗಳ ಸೋಲುಂಡ ಬಳಿಕ ರಾಜ್ಯ ಬಿಜೆಪಿಯು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದೆ.
"ಇವಿಎಂಗಳಿಂದ ಏನನ್ನೂ ಬೇಕಾದರೂ ಮಾಡಬಹುದು. ಮತಎಣಿಕೆ ವೇಳೆ ಆಡಳಿತ ಪಕ್ಷದಿಂದ ಮೋಸ ನಡೆದಿರುವುದನ್ನು ಒಪ್ಪದೇ ಇರಲು ಸಾಧ್ಯವಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ಹೇಳಿದ್ದಾರೆ.
"ತೃಣಮೂಲ ಕಾಂಗ್ರೆಸ್ ಗೆ ಬಹಿರಂಗವಾಗಿ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಚುನಾವಣೆಯಲ್ಲಿ ಜಯ ಗಳಿಸಲು ಟಿಎಂಸಿ ಏನು ಬೇಕಾದರೂ ಮಾಡುತ್ತದೆ" ಎಂದವರು ಹೇಳಿದ್ದಾರೆ.
ರಾಜ್ಯದ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಕಾಲಿಯಾಗಂಜ್, ಖರಗ್ಪುರ್ ಸಾದರ್ ಮತ್ತು ಕರೀಂಪುರ ಕ್ಷೇತ್ರಗಳಲ್ಲಿ ಟಿಎಂಸಿ ಜಯ ಗಳಿಸಿದೆ.